ಒಳ­ಚರಂ­ಡಿ ನೀರು ಹರಿಯುತ್ತಿದ್ದ ದೃಶ್ಯವನ್ನು ಅಂಗ್ಲ ಪತ್ರಿಕೆ ವರದಿಗಾರ ಕ್ಯಾಮೆರಾದಲ್ಲಿ ಸೆರೆ ಹಿಡಿ­ಯುತ್ತಿದ್ದರು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಹೊಯ್ಸಳ ವಾಹನದ ಪೇದೆಯೊಬ್ಬರು ಫೋಟೋ ತೆಗೆಯ­ದಂತೆ ವರದಿಗಾರನಿಗೆ ಸೂಚಿ­ಸಿ­­ದ್ದಾರೆ.
ಬೆಂಗಳೂರು (ನ.12): ಘಟನೆಯೊಂದರ ವರದಿಗೆ ತೆರಳಿದ್ದ ಆಂಗ್ಲ ಪತ್ರಿಕೆಯ ವರದಿಗಾರನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಪೊಲೀಸ್ ಪೇದೆ, ಹೊಯ್ಸಳ ವಾಹನ ಚಾಲಕರೊಬ್ಬರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಮೇಘರಿಕ್ ಅವರು ಆದೇಶಿಸಿದ್ದಾರೆ. ಆಲ್ಲದೆ,ಇಲಾಖಾ ತನಿಖೆಗೂ ಸೂಚಿಸಿದ್ದಾರೆ.
ಏನಾಯ್ತು?: ಶುಕ್ರವಾರ ಬಾಣಸವಾಡಿ ಮುಖ್ಯರಸ್ತೆಯಲ್ಲೇ ಒಳಚರಂಡಿ ನೀರು ಹರಿಯುತ್ತಿದ್ದನ್ನು ಒಂದಷ್ಟುಮಂದಿ ನಿಂತು ನೋಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಂಗ್ಲ ಪತ್ರಿಕೆ ವರದಿಗಾರ, ಕ್ಯಾಮೆರಾದಲ್ಲಿ ದೃಶ್ಯ ಸೆರೆ ಹಿಡಿ ಯುತ್ತಿದ್ದರು. ಅಷ್ಟೊತ್ತಿಗೆ ಹೊಯ್ಸಳ ವಾಹನವೂ ಸ್ಥಳಕ್ಕೆ ಬಂದಿದೆ. ಈ ವೇಳೆ ಪೇದೆಯೊಬ್ಬರು ಫೋಟೋ ತೆಗೆಯದಂತೆ ವರದಿಗಾರನಿಗೆ ಸೂಚಿಸಿದ್ದಾರೆ.
ನಂತರ ಅಲ್ಲಿಂದ ಹೊರಡುತ್ತಿದ್ದ ವರದಿಗಾರನನ್ನು ತಡೆದು ಪೇದೆ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ವಾಹನಕ್ಕೆ ಕೂರಿಸಿಕೊಂಡು ಒಂದಷ್ಟು ದೂರ ಹೋಗಿದ್ದಾರೆ. ನಂತರ ರಸ್ತೆ ಮಧ್ಯೆ ಬಿಟ್ಟು ಹೋಗಿದ್ದಾರೆ. ಘಟನೆ ಬಗ್ಗೆ ವರದಿಗಾರ ಪೂರ್ವ ವಿಭಾಗದ ಡಿಸಿಪಿ ಸತೀಶ್ ಅವರಿಗೆ ದೂರು ನೀಡಿದ್ದರು.
