ಸಚಿವ ಡಿಕೆ ಶಿವಕುಮಾರ್​ ಅವರ ಕಾರನ್ನೇ ತೆಗೆಸಿದ ಪೊಲೀಸರು ಬೆಂಗಳೂರಿನ ಶಕ್ತಿಭವನದ ಎದುರು ನಿಲ್ಲಿಸಿದ್ದ ಡಿ.ಕೆ.ಶಿವಕುಮಾರ್​ ಕಾರು

ಬೆಂಗಳೂರು[ಜೂ.21]: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಭದ್ರತಾ ವಾಹನಗಳಿಗೆ ಸರಾಗವಾಗಿ ದಾರಿ ಮಾಡಿಕೊಡುವ ಉದ್ದೇಶದಿಂದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ವಾಹನವನ್ನು ಪೊಲೀಸರು ಬೇರೆ ಕಡೆ ಸ್ಥಳಾಂತರಿದ ಘಟನೆ ಶಕ್ತಿಭವನದ ಬಳಿ ನಡೆದಿದೆ.

ಸಿಎಂ ಶಕ್ತಿಭವನಕ್ಕೆ ಆಗಮನವಾಗುವ ಪ್ರವೇಶದ್ವಾರದಿಂದ ಡಿ.ಕೆ. ಶಿವಕುಮಾರ್ ಅವರ ಕಾರು ದೂರದಲ್ಲಿತ್ತು. ಸಿಎಂ ಅವರ ಭದ್ರತೆಗೆ ಅಡ್ಡಿಯಾಗುವ ಕಾರಣದಿಂದ ಪೊಲೀಸರು ಸಚಿವರ ವಾಹನವನ್ನು ಬೇರೆಡೆ ಸ್ಥಳಾಂತರಿಸಿ ಮುಖ್ಯಮಂತ್ರಿಯವರ ಬೆಂಗಾವಲು ಪಡೆಯ ವಾಹನಗಳನ್ನು ನಿಲ್ಲಿಸಲು ಅವಕಾಶ ಮಾಡಿಕೊಟ್ಟರು. ಮುಖ್ಯಮಂತ್ರಿಯವರ ಭದ್ರತೆಗೆ ಯಾವುದೇ ಲೋಪವುಂಟಾಗಬಾರದೆಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.