'ಒಬ್ಬನಾದ್ರೂ ಸಾಯಬೇಕು’: ಅಧಿಕಾರಿ ಹೇಳಿಕೆ ವೈರಲ್!

Cop On Video Of Sterlite Protests
Highlights

ತಮಿಳುನಾಡಿನ ತೂತುಕುಡಿಯಲ್ಲಿ ಸ್ಟೆರ್ಲೈಟ್ ಕಂಪನಿ  ವಿರುದ್ದ ರೈತರ ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿಯೋರ್ವರ ಹೇಳಿಕೆ ಭಾರೀ ವಿವವಾದ ಸೃಷ್ಟಿಸಿದೆ.  ಪ್ರತಿಭಟನಾ ನಿರತ ರೈತರತ್ತ ಗುಂಡು ಹಾರಿಸುತ್ತಿದ್ದ ಕಿರಿಯ ಅಧಿಕಾರಿಗೆ ಕನಿಷ್ಠ ಒಬ್ಬನಾದರೂ ಸಾಯಬೇಕು ಎಂದು ಆಜ್ಞೆ ನೀಡುತ್ತಿರುವ ಅಧಿಕಾರಿಯ ಹೇಳಿಕೆ ವಿಡಿಯೋದಲ್ಲಿ ಸೆರೆಯಾಗಿದೆ.

ಚೆನೈ (ಮೇ. 23): ತಮಿಳುನಾಡಿನ ತೂತುಕುಡಿಯಲ್ಲಿ ಸ್ಟೆರ್ಲೈಟ್ ಕಂಪನಿ  ವಿರುದ್ದ ರೈತರ ಪ್ರತಿಭಟನೆ ವೇಳೆ ಪೊಲೀಸ್ ಅಧಿಕಾರಿಯೋರ್ವರ ಹೇಳಿಕೆ ಭಾರೀ ವಿವವಾದ ಸೃಷ್ಟಿಸಿದೆ.  ಪ್ರತಿಭಟನಾ ನಿರತ ರೈತರತ್ತ ಗುಂಡು ಹಾರಿಸುತ್ತಿದ್ದ ಕಿರಿಯ ಅಧಿಕಾರಿಗೆ ಕನಿಷ್ಠ ಒಬ್ಬನಾದರೂ ಸಾಯಬೇಕು ಎಂದು ಆಜ್ಞೆ ನೀಡುತ್ತಿರುವ ಅಧಿಕಾರಿಯ ಹೇಳಿಕೆ ವಿಡಿಯೋದಲ್ಲಿ ಸೆರೆಯಾಗಿದೆ.

ಪೊಲೀಸ್ ಕಾರ್ಯಾಚರಣೆ ನಿಲ್ಲಿಸುವಂತೆ  ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ  ಬಸ್ ಮೇಲೆ ನಿಂತಿದ್ದ ಅಧಿಕಾರಿಯೊಬ್ಬರು ಕನಿಷ್ಟ ಒಬ್ಬರಾದರೂ ಸಾಯಬೇಕೆಂದು ಹೇಳಿದ್ದು, ಕೆಲವೇ ಕ್ಷಣಗಳಲ್ಲಿ ಫೈರಿಂಗ್ ನಡೆಸಿದ್ದಾರೆ. ಗೋಲಿಬಾರ್ ನಿಂದಾಗಿ  11 ಮಂದಿ  ಸಾವನ್ನಪ್ಪಿದ್ದು,  50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ವಿಷಯುಕ್ತ ಅನಿಲ ಹೊರಸೂಸುತ್ತಿರುವ ಸ್ಟೆರ್ಲೈಟ್ ಕಂಪನಿ ಕಾರ್ಯಾಚರಣೆ ನಿಲ್ಲಿಸುವಂತೆ ರೈತರು ಪ್ರತಿಭಟನೆ ನಡೆಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

loader