ಆರಕ್ಷಕ ವಾಹನದ ಶಬ್ದ ಕೇಳಿಸಿಕೊಂಡ ಈ ಇಬ್ಬರು ಕಳ್ಳರು ಓಡಲು ಶುರು ಮಾಡಿದ್ದಾರೆ.
ಧಾರವಾಡ(ಆ.17): ಇಲ್ಲಿನ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಲು ಬಂದು ಪರಾರಿಯಾಗುತ್ತಿದ್ದ ಚೋರರನ್ನು ಪೊಲೀಸರು ಸಿನೀಮಿಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.
ಪಟ್ಟಣದ ಮಹಿಷಿ ರಸ್ತೆಯಲ್ಲಿರುವ ರಶ್ಮಿ ಜೋಷಿ ಅವರ ಮನೆಗೆ ನಿನ್ನೆ ರಾತ್ರಿ 1.30 ಗಂಟೆಗೆ ಆಗಮಿಸಿದ ಇಬ್ಬರು ಕಳ್ಳರು ಮನೆಯ ಮೇಲ್ಛಾವಣಿಯಲ್ಲಿ ಅಳವಡಿಸಿದ್ದ ಸೋಲಾರ್ ಪ್ಯಾನೆಲ್ನಲ್ಲಿಯ ವಿದ್ಯುತ್ ತಂತಿಯನ್ನು ಕದಿಯುತ್ತಿದ್ದಾಗ ಜಗರೂಕರಾದ ಮಾಲೀಕ ರಶ್ಮಿ ಜೋಷಿ ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಕೆಲವೇ ಕ್ಷಣದಲ್ಲಿ ಪೊಲೀಸರು ಆಗಮಿಸಿದರು. ಆರಕ್ಷಕ ವಾಹನದ ಶಬ್ದ ಕೇಳಿಸಿಕೊಂಡ ಈ ಇಬ್ಬರು ಕಳ್ಳರು ಓಡಲು ಶುರು ಮಾಡಿದ್ದಾರೆ.
ಓಡುತ್ತಾ ಹತ್ತಿರದಲ್ಲಿದ್ದ ಬಾವಿಗೆ ಜಿಗಿದಿದ್ದಾರೆ. ಬಾವಿಯೊಳಗೋದರೂ ಬಿಡದ ಪೊಲೀಸರು ಇಬ್ಬರನ್ನು ಬಂಧಿಸಿ ಸೆರೆಮನೆಗೆ ತಳ್ಳಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
