ನವದೆಹಲಿ[ಮಾ.06]: ಪುಲ್ವಾಮಾ ದಾಳಿಯನ್ನು ಒಂದು ದುರ್ಘಟನೆ ಎಂದು ಕರೆಯುವ ಮೂಲಕ ಕಾಂಗ್ರೆಸ್‌ ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌ ವಿವಾದಕ್ಕೆ ಸಿಲುಕಿದ್ದಾರೆ. ತಮ್ಮ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾದ ಬಳಿಕ ಇದೊಂದು ಭಯೋತ್ಪಾದಕ ಘಟನೆ ಎಂದು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.

ಇದೇ ವೇಳೆ ದಿಗ್ವಿಜಯ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ವಿ.ಕೆ. ಸಿಂಗ್‌, ಭಯೋತ್ಪಾದಕ ದಾಳಿಯನ್ನು ಒಂದು ದುರ್ಘಟನೆ ಎಂದು ಕರೆಯುವುದು ನಮ್ಮ ದೇಶದಲ್ಲಿ ರಾಜಕೀಯ ಉಪನ್ಯಾಸ ಆಗಬಾರದು. ನೀವು ರಾಜೀವ್‌ ಗಾಂಧಿ ಹತ್ಯೆಯನ್ನು ಒಂದು ಅಪಘಾತ ಎಂದು ಕರೆಯುತ್ತೀರಾ? ಸಂವೇದನಾ ರಹಿತ ಹೇಳಿಕೆ ನೀಡಿ ದೇಶದ ಮತ್ತು ಸೇನಾ ಪಡೆಗಳ ನೈತಿಕತೆಯನ್ನು ದುರ್ಬಲ ಗೊಳಿಸಬೇಡಿ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಪುಲ್ವಾಮಾ ದಾಳಿ ಸಂಬಂಧ ಹೇಳಿಕೆ ನೀಡಿರುವ ದಿಗ್ವಿಜಯ್ ಸಿಂಗ್ ವಿವಾದಕ್ಕೀಡಾಗಿದ್ದಾರೆ.