ಬೆಂಗಳೂರು[ಮಾ. 05] ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುಂಡಿಕ್ಕಿ ಕೊಲ್ಲಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಕ್ಷಮೆ ಕೇಳಿದ್ದಾರೆ.

ಈ ಬಗ್ಗೆ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಗೋಪಾಲಕೃಷ್ಣ,  ರಾಷ್ಟ್ರಪಿತ ಗಾಂಧೀಜಿ ಅವರಿಗೆ ವಿಎಚ್.ಪಿಯ ಪೂಜಾ ಪಾಂಡೆ ಅವರು ಬಂದೂಕು ತೋರಿಸಿದ್ದರು. ಇದನ್ನ ಸಹಿಸಲಾಗದೇ ನಾನು ಬಿಜೆಪಿಯವರಿಗೆ ನಿಮ್ಮ ನಾಯಕರಾದ ಮೋದಿ ಅವರಿಗೆ ಹೀಗೆ ಗನ್ ಹಿಡಿಯುತ್ತೀರಾ ಎಂದು ಪ್ರಶ್ನಿಸಿದ್ದೆ.

'ಪ್ರಧಾನಿ ನರೇಂದ್ರ ಮೋದಿ ಗುಂಡಿಟ್ಟು ಕೊಲ್ಲಿ’ ಬೇಳೂರಿಂದ ಇದೆಂತಾ ಮಾತು

ಪ್ರಧಾನಿ ಅವರ ಕೊಲೆ ಮಾಡಬೇಕು ಅನ್ನೋ ಉದ್ದೇಶದಲ್ಲಿ ನಾನು ಮಾತಾಡಿಲ್ಲ. ನನ್ನ ಹೇಳಿಕೆಯಿಂದ ಯಾರ ಮನಸಿಗಾದರು ನೋವಾಗಿದ್ದರೇ ನಾನು ಕ್ಷಮೆ ಕೋರುತ್ತೇನೆ ಎಂದರು.