ಹೊಳಲ್ಕೆರೆ ಬಿಜೆಪಿ ಶಾಸಕರು ಬೆಂಕಿ ಇಡುತ್ತಾರಂತೆ...ಕೇಸ್ ದಾಖಲು!
ಬೆಂಕಿ ಹಚ್ಚುವುದು ಕೆಲ ರಾಜಕಾರಣಿಗಳಿಗೆ ನೀರು ಕುಡಿದಷ್ಟೇ ಸುಲಭ ಆಗ್ಬಿಟ್ಟಿದೆ. ಪೊಲೀಸ್ ಠಾಣೆ ವಿಚಾರಕ್ಕೆ ಬಂದ್ರೆ ರಾಜಕಾರಣಿಗಳು ಮಾತಾಡ್ರೆ ಸಾಕು ಬೆಂಕಿ ಹಚ್ಚುತ್ತೇನೆ ಎಂದು ಅವಾಜ್ ಹಾಕುತ್ತಾರೆ. ಅಂತಹದ್ದೇ ಮತ್ತೊಂದು ಒಂದು ಪ್ರಕರಣಕ್ಕೆ ರಾಜ್ಯ ಸಾಕ್ಷಿಯಾಗಿದ್ದು ಶಾಸಕರು ನಾಲಿಗೆ ಹರಿ ಬಿಟ್ಟಿದ್ದಾರೆ.
ಚಿತ್ರದುರ್ಗ[ಜ.07] ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಹೊಳಲ್ಕೆರೆಯ ಬಿಜೆಪಿ ಶಾಸಕ ಎಂ.ಚಂದ್ರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು ಪ್ರಕರಣ ದಾಖಲಾಗಿದೆ.
ಅಧಿಕಾರಿಗಳಿಗೆ ಸಿಕ್ಕ ಸಿಕ್ಕಲ್ಲಿ ಹೊಡೆಯುತ್ತೇವೆ, ಪೊಲೀಸ್ ಠಾಣೆಗಳಿಗೆ ಬೆಂಕಿ ಇಡುತ್ತೇವೆ ಎಂದು ಹೇಳಿಕೆ ನೀಡಿದ್ದು ಎಂ.ಚಂದ್ರಪ್ಪ ವಿರುದ್ಧ ಐಪಿಸಿ ಸೆಕ್ಷನ್ 189, 504, 506(2) ಅಡಿಯಲ್ಲಿ ಪ್ರಕರಣದಡಿಯಲ್ಲಿ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಗೂಳಿಹಟ್ಟಿ ಶೇಖರ್
ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆ ಕೊಣಾಜೆಯಲ್ಲಿ ನಡೆದ ಕಾರ್ತಿಕ್ ರಾಜ್ ಕೊಲೆ ಪ್ರಕರಣದ ಸಂಬಂಧ ಮಾತನಾಡಿದ್ದ ಸಂಸದ ನಳೀನ್ ಕುಮಾರ್ ಕಟೀಲ್ ಆರೋಪಿಗಳನ್ನು ಬಂಧಿಸದಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಲು ಸಿದ್ಧ ಎಂಬ ಹೇಳಿಕೆ ನೀಡಿ ನಂತರ ಕ್ಷಮೆ ಕೋರಿದ್ದರು.