ನವದೆಹಲಿ: ಕರ್ನಾಟಕದಲ್ಲಿ ಏಪ್ರಿಲ್‌ 18 ಹಾಗೂ 23ರಂದು ನಡೆಯಲಿರುವ ಎರಡು ಹಂತದ ಮತದಾನದ ಪ್ರಮಾಣದ ಮೇಲೆ ಸಾಲು ಸಾಲು ರಜೆಗಳು ಪರಿಣಾಮ ಬೀರುವ ಸಾಧ್ಯತೆ ಇದೆ. 

ಏಪ್ರಿಲ್‌ 17ರಂದು ಮಹಾವೀರ ಜಯಂತಿ ರಜೆ ಇದೆ. ಏಪ್ರಿಲ್‌ 18ರಂದು ಗುಡ್‌ಫ್ರೈಡೇ, ಏಪ್ರಿಲ್‌ 20 ಶನಿವಾರದ ರಜೆ ಇರಲಿದ್ದು, 21ರಂದು ಭಾನುವಾರ ಇದೆ. ಈ ರಜೆಗಳ ನಡುವೆ, ಏಪ್ರಿಲ್‌ 18ರಂದು ಮೊದಲ ಹಂತದ ಮತದಾನ ನಡೆಯಲಿದೆ. 

ಇನ್ನು 2ನೇ ಹಂತದ ಮತದಾನ ಮಾಡುವವರು ಏಪ್ರಿಲ್‌ 18 ಹಾಗೂ ಏಪ್ರಿಲ್‌ 22ರಂದು 2 ದಿನಗಳ ರಜೆ ಪಡೆದರೆ ಸತತ ಸತತ 5 ದಿನ ರಜೆ ಪಡೆದಂತಾಗುತ್ತದೆ. ರಜಾ ಮಜಾ ಅನುಭವಿಸುವವರು ಮತಗಟ್ಟೆಗೆ ಬಾರದೇ ಹೋದರೆ ಏಪ್ರಿಲ್‌ 23ರಂದು ನಡೆಯಲಿರುವ ಮತದಾನದ ಪ್ರಮಾಣದ ಮೇಲೆ ಪರಿಣಾಮವಾಗುವ ಸಾಧ್ಯತೆ ಇದೆ.