ಮುಖ್ಯಮಂತ್ರಿ ವಿರುದ್ಧ ಪೋಸ್ಟ್ : ಪೊಲೀಸ್ ಪೇದೆ ಅಮಾನತು

First Published 19, Jun 2018, 1:18 PM IST
Constable Suspended Over Facebook Post Against CM
Highlights

ಪೊಲೀಸ್  ಪೇದೆಯೋರ್ವ  ಬಿಜೆಪಿ ಶಿಕಾರಿಪುರ ಫೇಸ್ ಬುಕ್ ಪೇಜ್ ನಲ್ಲಿ ಹಾಕಿದ್ದ ಕುಮಾರ ಸ್ವಾಮಿಯವರೇ ರಾಜೀನಾಮೆ‌ ಯಾವಾಗ ಎಂಬ ಪೋಸ್ಟ್ ಶೇರ್ ಮಾಡಿದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತು ಮಾಡಲಾಗಿದೆ.
 

ಬೆಂಗಳೂರು :  ಪೊಲೀಸ್  ಪೇದೆಯೋರ್ವ  ಬಿಜೆಪಿ ಶಿಕಾರಿಪುರ ಫೇಸ್ ಬುಕ್ ಪೇಜ್ ನಲ್ಲಿ ಹಾಕಿದ್ದ ಕುಮಾರ ಸ್ವಾಮಿಯವರೇ ರಾಜೀನಾಮೆ‌ ಯಾವಾಗ ಎಂಬ ಪೋಸ್ಟ್ ಶೇರ್ ಮಾಡಿದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತು ಮಾಡಲಾಗಿದೆ.

ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆ ಪೇದೆ ಅರುಣ್ ಡೊಳ್ಳಿನ್ ಸರ್ಕಾರಿ ಸೇವೆಯಲ್ಲಿದ್ದುಕೊಂಡು ಸರ್ಕಾರದ ವಿರುದ್ಧವೇ ಪೋಸ್ಟ್ ಶೇರ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.  

18 ದಿನ ಕಳೆದರೂ ಕೂಡ ಸಾಲಮನ್ನಾ ಮಾಡಿಲ್ಲವೆಂದು ಬಿಜೆಪಿಯ  ರಾಜೀನಾಮೆ ಯಾವಾಗ ಎಂಬ ಪೋಸ್ಟ್ ಶೇರ್ ಮಾಡಿದ್ದರು.  ಅಲ್ಲದೇ ಕಾಂಗ್ರೆಸ್- ಜೆಡಿಎಸ್ ಪಕ್ಷದ ವಿರುದ್ಧ ಅಪಪ್ರಚಾರದ ಪೋಸ್ಟ್ ಕೂಡ ಶೇರ್ ಮಾಡಿದ್ದರು.

ಸರ್ಕಾರಿ ಸೇವೆಯಲ್ಲಿದ್ದುಕೊಂಡು ಬಿಜೆಪಿ ಕಾರ್ಯಕರ್ತರ ರೀತಿ ಪ್ರಚಾರ ಮಾಡುತ್ತಿದ್ದರು. ಅಲ್ಲದೇ ಈ ಹಿಂದೆಯೂ ಕೂಡ ಬಿಜೆಪಿ ಪರವಾದ ಅನೇಕ ವಿಡಿಯೋಗಳನ್ನು ಶೇರ್ ಮಾಡಿದ್ದರಿಂದ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

loader