ಶಿವಮೊಗ್ಗ[ಡಿ.03]: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಂದು ವೇಳೆ ಭಜರಂಗದಳ, ಆರ್’ಎಸ್ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ಒಟ್ಟಾಗಿ ಸೇರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸೋಲಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೇ ಕಾಂಗ್ರೆಸ್ ಪಕ್ಷವೇ ರಾಮ ಮಂದಿರ ನಿರ್ಮಾಣ ಮಾಡುತ್ತದೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಶೋಭ ಜತೆ ಯಡಿಯೂರಪ್ಪ ಕೇರಳಕ್ಕೆ ಹೋಗಿದ್ದೇಕೆ..?

ಶಿವಮೊಗ್ಗದಲ್ಲಿ ಮಾತನಾಡಿದ ಅವರು, 17 ದಿವಸದಲ್ಲಿ ಮಸೀದಿ ಕೆಡವಿದ ಬಿಜೆಪಿಗೆ 17 ವರ್ಷವಾದರೂ ಮಂದಿರ ನಿರ್ಮಿಸಲು ಅಗಿಲ್ಲವೆಂದು ಶಿವಸೇನೆ ಕೂಡ ಟೀಕಿಸಿದೆ. ಮುಸ್ಲಿಮರನ್ನು ಒಳಗೊಂಡಂತೆ ಎಲ್ಲರನ್ನೂ ಪ್ರೀತಿ -ವಿಶ್ವಾಸಕ್ಕೆ ತೆಗೆದುಕೊಂಡು ಮಂದಿರ ಕಟ್ಟಬೇಕಿದೆ. ನಾವು ಹಿಂದೂಗಳೇ, ನಾವು ಸಾವಿರಾರು ದೇವಾಲಯ ಕಟ್ಟಿದ್ದೀವಿ, ಮುಸ್ಲಿಂಮರನ್ನು ಸೇರಿಸಿಕೊಂಡು ಮಂದಿರ ಕಟ್ಟುತ್ತೇವೆ ಎಂದರು.

ಇದೇವೇಳೆ ಮತ್ತೊಮ್ಮೆ ಯಡಿಯೂರಪ್ಪ ಮೇಲೆ ಕಿಡಿಕಾರಿದ ಗೋಪಾಲಕೃಷ್ಣ, ಶಿವಮೊಗ್ಗದಲ್ಲಿ ಸ್ಮಾರ್ಟ್​ ಸಿಟಿ ಎಂದರೇ ಯಡಿಯೂರಪ್ಪನವರ ಹೋಟೆಲ್ ಮತ್ತು ಕಾಲೇಜ್. ಮೋದಿ ಹೇಳಿದ ಅಚ್ಛೆ ದಿನ್ ಬಂದಿರುವುದು ಯಡಿಯೂರಪ್ಪ, ಮತ್ತವರ ಮಕ್ಕಳಿಗೆ ಎಂದು ವ್ಯಂಗ್ಯವಾಡಿದರು. ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಯು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರೆ ನಾವು ಡಿ‌ 10 ರಂದು ಶಿಕಾರಿಪುರದಲ್ಲಿ ಯಡಿಯೂರಪ್ಪ ಮನೆಗೆ ಮುತ್ತಿಗೆ ಹಾಕುತ್ತೇವೆ. ಇಂದು ಪ್ರತಿಭಟನೆಯಲ್ಲಿ ಮಹಿಳೆಯರು ಸಾಂಕೇತಿಕವಾಗಿ ಪರಕೆ ಹಿಡಿದು ಬಂದಿದ್ದು. ಸಿಲಿಂಡರ್ ಬೆಲೆ ಏರಿಕೆ ಕಂಡಿದ್ದು ಬಿಜೆಪಿಯವರು ಲೋಕಸಭಾ ಚುನಾವಣೆಯಲ್ಲಿ ಓಟ್ ಕೇಳಲು ಮನೆಗೆ ಬಂದರೇ ಮಹಿಳೆಯರು ಇದೇ ಪರಕೆಯಲ್ಲಿ ಹಿಡಿದು ಹೊಡೆಯುತ್ತಾರೆ ಎಂದರು.