ಭರ್ಜರಿ ಪಿಎಫ್ಐ ಸಮಾವೇಶ ನಡೆಸಲು ಅನುಮತಿ ನೀಡದ್ದ ಕಾಂಗ್ರೆಸ್ ಇದೀಗ ಪಿಎಫ್ಐ ಬ್ಯಾನ್ ಒತ್ತಾಯಿಸುತ್ತಿದೆ. ಜೊತೆಗೆ ಆರ್ ಎಸ್ ಎಸ್ ಕೂಡ ಬ್ಯಾನ್ ಆಗ್ಬೇಕು ಅಂತಾ ಹೇಳ್ತಿದೆ. ಪಿಎಫ್ಐ ಬಗ್ಗೆ ಮೃದು ಧೋರಣೆ ಹೊಂದಿದ್ದ ಕೈ ಪಕ್ಷ ಮೊದಲ ಬಾರಿಗೆ ಬ್ಯಾನ್ ಬಗ್ಗೆ ರಿಯಾಕ್ಟ್ ಮಾಡಿದೆ.

ಬೆಂಗಳೂರು (ನ.03): ಭರ್ಜರಿ ಪಿಎಫ್ಐ ಸಮಾವೇಶ ನಡೆಸಲು ಅನುಮತಿ ನೀಡದ್ದ ಕಾಂಗ್ರೆಸ್ ಇದೀಗ ಪಿಎಫ್ಐ ಬ್ಯಾನ್ ಒತ್ತಾಯಿಸುತ್ತಿದೆ. ಜೊತೆಗೆ ಆರ್ ಎಸ್ ಎಸ್ ಕೂಡ ಬ್ಯಾನ್ ಆಗ್ಬೇಕು ಅಂತಾ ಹೇಳ್ತಿದೆ. ಪಿಎಫ್ಐ ಬಗ್ಗೆ ಮೃದು ಧೋರಣೆ ಹೊಂದಿದ್ದ ಕೈ ಪಕ್ಷ ಮೊದಲ ಬಾರಿಗೆ ಬ್ಯಾನ್ ಬಗ್ಗೆ ರಿಯಾಕ್ಟ್ ಮಾಡಿದೆ.

ಅಲ್ಪಸಂಖ್ಯಾತರ ಒಲೈಕೆಯಲ್ಲಿ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಅಂತಾ ಹೇಳಬಹುದು. ಆ ಕಾರಣಕ್ಕಾಗಿಯೇ ಪಿಎಫ್ಐ ಸಂಘಟ‌ನೆ ಬ್ಯಾನ್ ಬಗ್ಗೆ ಕೂಗೆದ್ದಾಗಲೆಲ್ಲಾ ಕಾಂಗ್ರೆಸ್ ಬೇಡ ಅಂತಾ ಹೇಳುತ್ತಾ ಬಂದಿತ್ತು. ಆದರೆ ಇದೀಗ ಮೊದಲ ಬಾರಿಗೆ ಪಿಎಫ್ಐ ಬ್ಯಾನ್ ಆಗ್ಬೇಕು ಅಂತಾ ಹೇಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ದಿನೇಶ ಗುಂಡೂರಾವ್ ಪಿಎಫ್ಐ ಬ್ಯಾನ್ ಆಗಬೇಕು ಅಂತಾ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಮಾಧ್ಯಮಗಳಿಗೆ ಹೇಳಿಕೆಯನ್ನೂ ನೀಡಿದ್ದಾರೆ. ಪಿಎಫ್ಐ ಜೊತೆಗೆ ಸಂಘ ಪರಿವಾರವನ್ನೂ ಬ್ಯಾನ್ ಮಾಡಬೇಕು ಅಂತಾ ಆಗ್ರಹಿಸಿದ್ದಾರೆ. ಇಂತಹ ಸಿದ್ಧಾಂತಗಳು ಮೊಳಕೆ ಒಡೆಯದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಕಾಂಗ್ರೆಸ್ ನ ಈ ನಡೆ ಬಹಳ ಅಚ್ಚರಿ ಮೂಡಿಸಿದೆ ಎಂದೇ ಹೇಳಬಹುದು.

ಪಿಎಫ್ ಐ ಸೇರಿ ಇತರೆ ಅಲ್ಪಸಂಖ್ಯಾತ ಸಂಘಟನೆಗಳ ಬಗ್ಗೆ ಕಾಂಗ್ರೆಸ್ ಹಿಂದಿನಿಂದಲೂ ಸಾಫ್ಟ್ ಕಾರ್ನರ್ ಆಗಿತ್ತು. ಆ ಕಾರಣಕ್ಕಾಗಿಯೇ ಬೆಂಗಳೂರಲ್ಲಿ ಪಿಎಫ್ ಐ ಮಹಾ ಸಮ್ಮೇಳನಕ್ಕೆ ಎಲ್ಲ ಬೆಂಬಲ, ಸಹಕಾರವನ್ಬೂ ಕಾಂಗ್ರೆಸ್ ನೀಡಿತ್ತು. ಆದ್ರೆ ಏಕಾಏಕಿ ಬ್ಯಾನ್ ಬಗ್ಗೆ ಮಾತಾಡ್ತಿದೆ ಅಂದ್ರೆ ಆಶ್ಚರ್ಯವೇ ಸರಿ ಅನ್ನೋ ಅಭಿಪ್ರಾಯವೂ ರಾಜಕೀಯ ವಲಯದಲ್ಲಿ ಕೇಳಿಬರ್ತಿದೆ.