- ಗುಜರಾತ್‌ನಲ್ಲಿ ಚುನಾವಣೆ ಫಲಿತಾಂಶದಲ್ಲಿ ತುಸು ಉತ್ತಮ ಫಲಿತಾಂಶ ಬಂದಿರುವ ಕಾಂಗ್ರೆಸ್‌ಗೆ ಹೆಚ್ಚಾಗಿದೆ ವಿಶ್ವಾಸ.
ಅಹಮದಾಬಾದ್: ಗುಜರಾತ್ ಚುನಾವಣೆಯ ಫಲಿತಾಂಶ ಪರಾಮರ್ಶೆಗಾಗಿ ಕಾಂಗ್ರೆಸ್ ನಾಯಕರು ಶನಿವಾರ ಇಲ್ಲಿ ಸಭೆ ನಡೆಸಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ಸಿಂಗ್ ಸೇರಿದಂತೆ ಪಕ್ಷದ ಹಲವು ನಾಯಕರು ಭಾಗಿಯಾಗಿದ್ದರು.
ಈ ಸಭೆ ಬಳಿಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮುಂದಿನ ಚುನಾವಣೆಯಲ್ಲಿ ಪಕ್ಷ 135 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೋದಿ ಅವರ ಬಹುಚರ್ಚಿತ ಗುಜರಾತ್ ಅಭಿವೃದ್ಧಿ ಮಾದರಿಯನ್ನು ಚುನಾವಣೆಯಲ್ಲಿ ಜನರು ತಿರಸ್ಕರಿಸಿದ್ದಾರೆ. ಚುನಾವಣೆಯಲ್ಲಿ ನಾವು ಸೋತಿರಬುದು.
ಆದರೆ, ವಾಸ್ತವದಲ್ಲಿ ನಾವೇ ಗೆದ್ದಿದ್ದೇವೆ. ಬಿಜೆಪಿ ಈ ಚುನಾವಣೆಯಲ್ಲಿ ರೋಷದಿಂದ ಹೋರಾಡಿತು. ಬಿಜೆಪಿ ಬಳಿ ಹಣ ಬಲ ಸೇರಿ ಎಲ್ಲಾ ಸಲಕರಣೆಗಳಿದ್ದವು. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಕೈಗಾರಿಕೋದ್ಯಮಿಗಳು ಬಂದು ಪ್ರಚಾರ ಮಾಡಿದರು. ಆದರೆ, ನಾವು ಸತ್ಯದ ಪರ ಹೋರಾಡಿದೆವು ಎಂದು ಹೇಳಿ ಕಾರ್ಯಕರ್ತರನ್ನು ಹುರಿದುಂಬಿಸಿದರು.
