ನೋಟು ಅಮಾನ್ಯ ಕ್ರಮದಿಂದ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ, ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಹಾಗೂ ಜನಸಾಮಾನ್ಯರು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಆದರೆ ಪ್ರಯೋಜನವಾಗಿರುವುದು ಕೇವಲ ಪ್ರಧಾನಿ ಮೋದಿಯವರ 50 ಮಂದಿ ಆಪ್ತ ಸ್ನೇಹಿತರಿಗೆ ಮಾತ್ರವೆಂದು ಸುರ್ಜೆವಾಲಾ ಹೇಳಿದ್ದಾರೆ.
ನವದೆಹಲಿ (ಡಿ.31): ನೋಟು ಅಮಾನ್ಯ ಕ್ರಮವನ್ನು ಸ್ವತಂತ್ರ ಭಾರತದ ಅತೀ ದೊಡ್ಡ ಹಗರಣವೆಂದು ಬಣ್ಣಿಸಿರುವ ಕಾಂಗ್ರೆಸ್ ಪಕ್ಷವು, ಅದರ ವಿರುದ್ಧ ದೇಶಾದಾದ್ಯಂತ ಅಭಿಯಾನವನ್ನು ಹಮ್ಮಿಕೊಳ್ಳುವುದಾಗಿ ಹೇಳಿದೆ.
ನೋಟು ಅಮಾನ್ಯ ಕ್ರಮವು ಸ್ವತಂತ್ರ ಭಾರತದ ಅತೀ ದೊಡ್ಡ ಹಗರಣವಾಗಿದೆ, ಕಾಂಗ್ರೆಸ್ ಅದರ ವಿರುದ್ಧ ದೇಶವ್ಯಾಪಿ ಚಳುವಳಿ ನಡೆಸಲಿದೆ, ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ನೋಟು ಅಮಾನ್ಯ ಕ್ರಮದಿಂದ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ, ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಹಾಗೂ ಜನಸಾಮಾನ್ಯರು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಆದರೆ ಪ್ರಯೋಜನವಾಗಿರುವುದು ಕೇವಲ ಪ್ರಧಾನಿ ಮೋದಿಯವರ 50 ಮಂದಿ ಆಪ್ತ ಸ್ನೇಹಿತರಿಗೆ ಮಾತ್ರವೆಂದು ಸುರ್ಜೆವಾಲಾ ಹೇಳಿದ್ದಾರೆ.
ಭರವಸೆಗಳನ್ನು ನೀಡಿ ಅದನ್ನು ಮುರಿಯುವುದು ಪ್ರಧಾನಿ ಮೋದಿಯವರಿಗೆ ಅಭ್ಯಾಸವಾಗಿ ಬಿಟ್ಟಿದೆಯೆಂದು ಅವರು ಹೇಳಿದ್ದಾರೆ.
ನೋಟು ಅಮಾನ್ಯ ಕ್ರಮದ ವಿರುದ್ಧ ಜನವರಿ ತಿಂಗಳಿನಲ್ಲಿ 3 ಹಂತಗಳಲ್ಲಿ ಅಭಿಯಾನ ನಡೆಯಲಿರುವುದು ಎಂದು ಅವರು ತಿಳಿಸಿದ್ದಾರೆ.