ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾಗೆ ಕಾಂಗ್ರೆಸ್ ಪಕ್ಷವು ಇದೀಗ ಟ್ವೀಟ್ ಒಂದನ್ನು ಟ್ಯಾಗ್ ಮಾಡಿದ್ದು ಇದೀಗ ಸುದ್ದಿಯಾಗಿದೆ. ವಕ್ತಾರೆ ಪ್ರಿಯಾಂಕ ಚತುರ್ವೇದಿಗೆ ಟ್ಯಾಗ್ ಮಾಡುವ ಬದಲು ಚೋಪ್ರಾಗೆ ಮಾಡಿದೆ.   

ನವದೆಹಲಿ : ಕಾಂಗ್ರೆಸ್ ಪಕ್ಷವು ತನ್ನ ವಕ್ತಾರೆ ಪ್ರಿಯಾಂಕ ಚತುರ್ವೇದಿಗೆ ಟ್ಯಾಗ್ ಮಾಡುವ ಟ್ವೀಟ್ ಒಂದನ್ನು ಪ್ರಿಯಾಂಕ ಚೋಪ್ರಾಗೆ ಟ್ಯಾಗ್ ಮಾಡಿರುವುದು ಇದೀಗ ವೈರಲ್ ಆಗಿದೆ. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಣ್ಣು ಪರೀಕ್ಷೇ ಲ್ಯಾಬ್ ತೆರೆಯುವುದಾಗಿ ಹೇಳಿ ಇದೀಗ ಮಣ್ಣು ಪರೀಕ್ಷೆ ಕೇಂದ್ರವನ್ನು ತೆರೆಯದೇ ರೈತರಿಗೆ ಸುಳ್ಳು ಹೇಳಿದೆ ಎಂದು ಟ್ವೀಟ್ ಮಾಡಿ ಬಳಿಕ ಆ ಟ್ವೀಟ್ ಅನ್ನು ಪ್ರಿಯಾಂಕ ಚೋಪ್ರಾಗೆ ಟ್ಯಾಗ್ ಮಾಡಿದೆ. 

ಪಕ್ಷದ ವಕ್ತಾರೆ ಪ್ರಿಯಾಂಕ ಚತುರ್ವೇದಿಗೆ ಟ್ಯಾಗ್ ಮಾಡುವ ಬದಲು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾಗೆ ಟ್ಯಾಗ್ ಮಾಡಿದೆ. ಕಾಂಗ್ರೆಸ್ ನ ಅಫಿಶಿಯಲ್ ಹ್ಯಾಂಡಲ್ ನಿಂದಲೇ ಈ ಟ್ವೀಟ್ ಮಾಡಿದ್ದು, ತಪ್ಪಿನ ಅರಿವಾಗುತ್ತಿದ್ದಂತೆ ಬಳಿಕ ಡಿಲೀಟ್ ಮಾಡಲಾಗಿದೆ. 

ಮಣ್ಣಿನ ಗುಣಮಟ್ಟವನ್ನು ಅಳೆಯುವ ಸಲುವಾಗಿ ಮಣ್ಣು ಪರೀಕ್ಷಾ ಕೇಂದ್ರವನ್ನು ತೆರೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೇಳಿತ್ತು.