ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಸೋಷಿಯಲ್ ಮೀಡಿಯಾ ವಾರ್ ಮುಗಿಲು ಮುಟ್ಟಿದ್ದು, #DeleteNamoApp ಎಂಬ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಿದೆ. ಆದರೆ, ಕಾಂಗ್ರೆಸ್ಸೇ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಿಂದ ಡಿಲೀಟ್ ಆಗಿದೆ.
ಹೊಸದಿಲ್ಲಿ: ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಸೋಷಿಯಲ್ ಮೀಡಿಯಾ ವಾರ್ ಮುಗಿಲು ಮುಟ್ಟಿದ್ದು, #DeleteNamoApp ಎಂಬ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಿದೆ. ಆದರೆ, ಕಾಂಗ್ರೆಸ್ಸೇ ಆ್ಯಪ್ ಗೂಗಲ್ ಪ್ಲೇ ಸ್ಟೋರ್ನಿಂದ ಡಿಲೀಟ್ ಆಗಿದೆ.
ಇದರಿಂದ ಪಕ್ಷಕ್ಕೆ ಭಾರಿ ಮುಜುಗರವಾಗಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿ ಹಲವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಕಾಲೆಳೆದಿದ್ದಾರೆ.
ನಮೋ ಆ್ಯಪ್ ರಹಸ್ಯವಾಗಿ ಸಾರ್ವಜನಿಕರಿಂದ ಮಾಹಿತಿ ಕದಿಯುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್, ಟ್ವೀಟರ್ ಹಾಗೂ ಫೇಸ್ಬುಕ್ನಲ್ಲಿ ಅಭಿಯಾನವನ್ನು ಕೈಗೊಂಡಿತ್ತು. ಆದರೀಗ ಆ ಪಕ್ಷದ ಆ್ಯಪ್ ಡಿಲೀಟ್ ಆಗಿರುವುದು ಟ್ರೋಲ್ಗೆ ಕಾರಣವಾಗಿದೆ.
ಕಾಂಗ್ರೆಸ್ #DeleteNaMoApp ಅಭಿಯಾನದ ನಂತರ ನಮೋ APP ಡೌನ್ಲೋಡ್ ಮಾಡಿಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗಿದೆ.
ಕಾಂಗ್ರೆಸ್ ಸ್ಪಷ್ಟನೆ ಏನು?
ತಪ್ಪು ಯುಆರ್ಎಲ್ ತೋರಿಸಿ, ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದ ಕಾರಣ ಗೂಗಲ್ ಪ್ಲೇ ಸ್ಟೋರ್ನಿಂದ ಆ್ಯಪನ್ನು ಡಿಲೀಟ್ ಮಾಡಲಾಗಿದೆ,ಎಂದು ಕಾಂಗ್ರೆಸ್ ಸ್ಫಷ್ಟನೆ ನೀಡಿದೆ.
