ಇಲ್ಲಿ ಕೊಡಗಿನ ಜನರು ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ. ಒಂದು ಕಾಲದ ಮಂಡ್ಯ ಸಂಸದೆ ಜರ್ಮನಿಯಲ್ಲಿದ್ದಾರೆ. ಕೊಡಗಿಗೂ-ಮಂಡ್ಯಕ್ಕೂ ಸಂಬಂಧ ಇಲ್ಲ ಎಂದು ನೀವು ವಾದಿಸಬಹುದು. ಆದರೆ ಹಿಂದೆ ಮಂಗಳೂರಿನಲ್ಲಿ ಗಲಭೆಗಳಾದಾಗ, ಕೊಡಗಿನಲ್ಲಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತವಾಗಿದ್ದಾಗ ಅಂದಿನ ಸರಕಾರವನ್ನು ಸಮರ್ಥಿಸಕೊಂಡಿದ್ದ ರಮ್ಯಾ ಇದೀಗ ಯಾವ ಮಾತನ್ನು ಆಡಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ವೊಂದನ್ನು ರಿ ಟ್ವೀಟ್ ಮಾಡಿದ್ದು ಬಿಟ್ಟರೆ ಕೊಡಗಿನ ಬಗ್ಗೆ ಯಾವ ಮಾತನ್ನು ಆಡಿಲ್ಲ.... ಈ ಎಲ್ಲ ಆರೋಪಗಳು ಸೋಶಿಯಲ್ ಮೀಡಿಯಾದಲ್ಲಿ ಎದ್ದಿದೆ.. ಅದಕ್ಕೆ ಕಾರಣ ರಮ್ಯಾ ಹಾಕಿರುವ ಫೋಟೋಗಳು..
ಬೆಂಗಳೂರು[ಆ.23] ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿಯೂ ಅಷ್ಟೊಂದು ಆ್ಯಕ್ಟೀವ್ ಆಗಿರದ ರಮ್ಯಾ ಇದೀಗ ಒಂದೆ ಬಾರಿ ತಮ್ಮ ಜರ್ಮನಿಯ ಪ್ರಯಾಣದ ಭಾವಚಿತ್ರಗಳನ್ನು ಪ್ರಕಟಿಸಿದ್ದಾರೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಖಾರವಾದ ಪ್ರತಿಕ್ರಿಯೆಯನ್ನು ಎದುರಿಸಿದ್ದಾರೆ.
ಲೋಕಸಭಾ ಸದಸ್ಯ, ಉದ್ಯಮಿ ಮಿಲಿಂದ್ ದೇವೋರಾ ಜತೆ ಇರುವ ಫೋಟೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಜತೆಗೆ ಜರ್ಮನಿಯಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡ ಕಾರ್ಯಕ್ರಮಗಳ ವಿವರವನ್ನು ನೀಡಿದ್ದಾರೆ. ರಮ್ಯಾ ಅವರೆ ಕೊಡಗು ಜನರಿಗೆ ಸಹಾಯ ಮಾಡಿ ಎಂದು ಕೇಳಿಕೊಂಡವರು ಇದ್ದಾರೆ.
ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸೆಲ್ ನಲ್ಲಿ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ ವೇಳೆ ರಮ್ಯಾ ನಿರಂತರವಾಗಿ ಟ್ವೀಟ್ ಮಾಡಿದ್ದರು. ಪ್ರಕರಣ ಸುಳ್ಳು ಎಂದು ಸಮರ್ಥಿಸಿಕೊಂಡಿದ್ದರು.
