ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಎನ್ನಿಸಿಕೊಂಡು ಸದಾ ವಿವಾದವನ್ನೇ ಮೈಮೇಲೆ ಎಳೆದುಕೊಳ್ಳುತ್ತಿದ್ದ ರಮ್ಯಾ ಕೆಲ ದಿನಗಳಿಂದ ತಣ್ಣಗಾಗಿದ್ದರು. ಆದರೆ ಉಕ್ಕಿನ ಮನುಷ್ಯ ವಲ್ಲಭ ಭಾಯ್ ಪಟೇಲ್ ಪ್ರತಿಮೆ ಅನಾವರಣದ ಸಂದರ್ಭದಲ್ಲಿಯೂ ಮತ್ತೊಂದು ವಿವಾದ ಹೊತ್ತುಕೊಂಡಿದ್ದಾರೆ.
ನವದೆಹಲಿ[ನ.01] ಸದಾ ಒಂದಿಲ್ಲೊಂದು ವಿವಾದಾತ್ಮಕ ಟ್ವೀಟ್ ಮಾಡಿಯೇ ಸುದ್ದಿ ಮಾಡುವ ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಈ ಬಾರಿ ಅಂಥದ್ದೇ ಕೆಲಸ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ಯನು ಹಕ್ಕಿಯ ಹಿಕ್ಕೆಗೆ ಹೋಲಿಸಿ ಬರೆದ ರೀತಿಯ ಟ್ವೀಟ್ ಸದ್ದು ಮಾಡಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಅನಾವರಣಗೊಳಿಸುವ ವೇಳೆ ಕ್ಲಿಕ್ಕಿಸಿರುವ ಫೋಟೋವೊಂದನ್ನು ಪೋಸ್ಟ್ ಮಾಡಿರುವ ರಮ್ಯಾ ಸಾಲೊಂದನ್ನು ಬರೆದಿದ್ದಾರೆ.
ಫೋಟೋದಲ್ಲಿ ಮೋದಿ ಪಟೇಲರ ಪ್ರತಿಮೆಯ ಕಾಲಿನ ಬಳಿ ನಿಂತಿದ್ದಾರೆ. ರಮ್ಯಾ ಅವರ ಟ್ವೀಟ್‌ಗೆ ತರೇವಾರಿ ಪ್ರತಿಕ್ರಿಯೆ ಬಂದಿದ್ದು ರಾಹುಲ್ ಮತ್ತು ರಮ್ಯಾರನ್ನು ಜಾಲತಾಣಿಗರು ವಿವಿಧ ಫೋಟೋ ಬಳಸಿ ಝಾಡಿಸಿದ್ದಾರೆ.
