ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಕ್ಷಣೆಗಿರುವ ಸ್ಪೆಶಲ್ ಪ್ರೊಟೆಕ್ಷನ್ ಗ್ರೂಪ್ (ಎಸ್’ಪಿಜಿ)ಯ ಕಮಾಂಡೋ ಒಬ್ಬರು ನಾಪತ್ತೆಯಾಗಿದ್ದಾರೆ. ಕಳೆದ ಸೆ.3ರಿಂದ ರಾಕೇಶ್ ಕುಮಾರ್ ಎಂಬವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆಂದು ವರದಿಯಾಗಿದೆ.

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಕ್ಷಣೆಗಿರುವ ಸ್ಪೆಶಲ್ ಪ್ರೊಟೆಕ್ಷನ್ ಗ್ರೂಪ್ (ಎಸ್’ಪಿಜಿ)ಯ ಕಮಾಂಡೋ ಒಬ್ಬರು ನಾಪತ್ತೆಯಾಗಿದ್ದಾರೆ.

ಕಳೆದ ಸೆ.3ರಿಂದ ರಾಕೇಶ್ ಕುಮಾರ್ ಎಂಬವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆಂದು ವರದಿಯಾಗಿದೆ.

ಸೆ.1ರಂದು ಸೋನಿಯಾ ಗಾಂಧಿ ಅಧಿಕೃತ ನಿವಾಸ 10, ಜನಪಥದಲ್ಲಿ ರಾಕೇಶ್ ಕುಮಾರ್ ಕರ್ತವ್ಯಕ್ಕೆ ಹಾಜರಾಗಿದ್ದರು ಎನ್ನಲಾಗಿದೆ. ಆದರೆ ಸೆ. 1 ಅವರ ರಜಾದಿನವಾಗಿತ್ತು ಎಂದು ಬಳಿಕ ತಿಳಿದು ಬಂದಿದೆ. ಗೆಳೆಯರನ್ನು ಭೇಟಿಯಾದ ಬಳಿಕ 11 ಗಂಟೆ ಹೊತ್ತಿಗೆ ಅವರು ಅಲ್ಲಿಂದ ನಿರ್ಗಮಿಸಿದ್ದಾರೆ.

ಹಾಗಾದರೆ ಸೆ.1ರಂದು ಸಮವಸ್ತ್ರ ಧರಿಸಿ ಯಾಕೆ ಬಂದಿರಬಹುದು ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ.

ತನ್ನ ಸರ್ವಿಸ್ ರಿವಾಲ್ವರ್ ಹಾಗೂ ಮೊಬೈಲ್ ಪೋನನ್ನು ಬಿಟ್ಟು ಹೋಗಿರುವುದರಿಂದ ಪೊಲೀಸರಿಗೆ ಸಂಪರ್ಕವೂ ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.

ದೆಹಲಿಯ ದ್ವಾರಕಾದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ರಾಕೇಶ್ ವಾಸವಾಗಿದ್ದರು.