ನವದೆಹಲಿ[ಜೂ. 18] ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಕಣ್ಣು ಹೊಡೆದಿದ್ದಾರೆ. ಸಂಸತ್ ನಲ್ಲಿ ನೂತನ ಸಂಸದರ ಪ್ರಮಾಣವಚನ ನಡೆಯುತ್ತಿದೆ.  ಕಾರ್ಯಕ್ರಮ ಮುಗಿಸಿ ಹೊರಬಂದ ನಂತರ ಅಂದರೆ ಸಂಸತ್ ಭವನದ ಎದುರು ಪೋಟೋಗ್ರಾಫರ್ ಗಳನ್ನು ಕಂಡ ರಾಹುಲ್ ಕಣ್ಣು ಹೊಡೆದಿದ್ದಾರೆ.

ತಮ್ಮ ಕಾಯಂ ಕ್ಷೇತ್ರ ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತು ಕೇರಳದ ವಯನಾಡ್ ಮೂಲಕ ಸಂಸತ್ ಪ್ರವೇಶ ಮಾಡಿರುವ ಕಾಂಗ್ರೆಸ್ ಅಧ್ಯಕ್ಷರು ಪ್ರಮಾಣ ವಚನ ನಂತರ ರಿಜಿಸ್ಟರ್ ಗೆ ಸಹಿ ಹಾಕಲು ಮರೆತಿದ್ದರು.  ನಂತರ ಕೇಂದ್ರ ಸಚಿವರ ಆದಿಯಾಗಿ ಅನೇಕರು ರಾಹುಲ್ ಅವರನ್ನು ಕರೆದು ಸಹಿ ಹಾಕಿಸಿದ್ದರು.

ರಫೇಲ್ ವಿಚಾರದ ಕುರಿತು ಚರ್ಚೆ ನಡೆದಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡು ನಂತರ ರಾಹುಲ್ ಕಣ್ಣು ಹೊಡೆದಿದ್ದು ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿತ್ತು.