ಸಭಾಪತಿ ಡಿ ಹೆಚ್ ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಕಾಂಗ್ರೆಸ್ ಮುಂದಾಗಿದೆ. ಈ ಮೂಲಕ ಬಿಜೆಪಿಗೆ ಮತ್ತೊಂದು ಮುಖಭಂಗವನ್ನುಂಟು ಮಾಡುವ ಯತ್ನಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಆಡಳಿತರೂಢ ಕಾಂಗ್ರೆಸ್ ಮೇಲ್ಮನೆ ಸದಸ್ಯರ ಬಲ ಹೆಚ್ಚಿಸಿಕೊಂಡಿದ್ದೇ ತಡ, ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದೆ. ಈ ಮೂಲಕ ಬಿಜೆಪಿಗೆ ಮತ್ತೊಂದು ಮುಖಭಂಗ ಉಂಟು ಮಾಡಲು ಕಾಂಗ್ರೆಸ್ ಚಿಂತನೆ ನಡೆಸಿದೆ.

ಬೆಂಗಳೂರು(ಮೇ.31): ಸಭಾಪತಿ ಡಿ ಹೆಚ್ ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಕಾಂಗ್ರೆಸ್ ಮುಂದಾಗಿದೆ. ಈ ಮೂಲಕ ಬಿಜೆಪಿಗೆ ಮತ್ತೊಂದು ಮುಖಭಂಗವನ್ನುಂಟು ಮಾಡುವ ಯತ್ನಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಆಡಳಿತರೂಢ ಕಾಂಗ್ರೆಸ್ ಮೇಲ್ಮನೆ ಸದಸ್ಯರ ಬಲ ಹೆಚ್ಚಿಸಿಕೊಂಡಿದ್ದೇ ತಡ, ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದೆ. ಈ ಮೂಲಕ ಬಿಜೆಪಿಗೆ ಮತ್ತೊಂದು ಮುಖಭಂಗ ಉಂಟು ಮಾಡಲು ಕಾಂಗ್ರೆಸ್ ಚಿಂತನೆ ನಡೆಸಿದೆ.

ಎಸ್ ಆರ್ ಪಾಟೀಲ್’​ರಿಗೆ ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್ ತಯಾರಾಗಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ. ಒಂದು ವೇಳೆ, ಕಾರ್ಯಾಧ್ಯಕ್ಷ ಸ್ಥಾನ ಸಿಗದಿದ್ದ ಪಕ್ಷದಲ್ಲಿ ಸಭಾಪತಿ ಕುರ್ಚಿಲೀ ಪಾಟೀಲರನ್ನೇ ಕೂರಿಸುವ ಲೆಕ್ಕಾಚಾರ ಸಿದ್ದರಾಮಯ್ಯ ಅವರದ್ದು. ಒಂದು ವೇಳೆ ಪಾಟೀಲರು ಕೆಪಿಸಿಸಿ ಕಾರ್ಯಾಧ್ಯಕ್ಷರಾದರೆ, ವಿ ಎಸ್ ಉಗ್ರಪ್ಪ ಅಥವಾ ಹೆಚ್ ಎಂ ರೇವಣ್ಣ ಇವರಿಬ್ಬರಲ್ಲಿ ಒಬ್ಬರನ್ನು ಸಭಾಪತಿ ಮಾಡುವ ಬಗ್ಗೆಯೂ ಚರ್ಚೆ ನಡೀತಿದೆ.. ಇದಕ್ಕಾಗಿಯೇ ಇಂದು ಸಭಾಪತಿ ಅವಿಶ್ವಾಸ ನಿರ್ಣಯದ ಪ್ರಸ್ತಾವನೆಯನ್ನು ಕಾಂಗ್ರೆಸ್ ಸಲ್ಲಿಸಿದೆ.

ಜೂನ್ 5 ರಿಂದ ವಿಧಾನ ಮಂಡಲ ಕಲಾಪ ಕೂಡ ಶುರುವಾಗಲಿದೆ. ಈ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಡಿ ಕೆ ಶಿವಕುಮಾರ್​ಗೆ ತಪ್ಪಿಸಿದ್ದಾಗಿದೆ. ಈ ಖುಷಿಗಾದರೂ ಜೆಡಿಎಸ್ ಕೈಹಿಡಿಯುತ್ತೆ ಎನ್ನುವ ವಿಶ್ವಾಸ ಸಿದ್ದರಾಮಯ್ಯರದ್ದು.

ಪರಿಷತ್ ಬಲಾಬಲ!

ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರಮುಖ ಕಾರಣ ಮೇಲ್ಮನೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದು. ಸದ್ಯ ಕೈ ಬಲ 32 ಇದೆ.. ಬಿಜೆಪಿ 22, ಜೆಡಿಎಸ್ 13, ಪಕ್ಷೇತರ ಸದಸ್ಯರು 5 ಮಂದಿ ಇದ್ದಾರೆ. ಇನ್ನೂ 2 ಸ್ಥಾನ ಖಾಲಿ ಹಾಗೂ 1 ಸಭಾಪತಿ. ಹೀಗೆ ಒಟ್ಟು 75 ಸದಸ್ಯರಿದ್ದಾರೆ. 38 ಸದಸ್ಯರ ಬೆಂಬಲ ಬೇಕೇ ಬೇಕು.

ದೇವೇಗೌಡರು ಒಪ್ಪಿದರೆ ಮಾತ್ರ ಕಾಂಗ್ರೆಸ್ ಲೆಕ್ಕಚಾರ ಸರಿಹೋಗುತ್ತೆ.. ಹೀಗಾಗಿ ಕೈ ತಂತ್ರ ಭಾರೀ ಕುತೂಹಲ ಕೆರಳಿಸಿದೆ.