ರಾಜ್ಯಸಭಾ ಚುನಾವಣಾ ಹಿನ್ನಲೆಯಲ್ಲಿ ಗುಜರಾತ್ ಶಾಸಕರ ಭದ್ರತೆಯನ್ನು ಖಾತ್ರಿಪಡಿಸಿ ಎಂದು ಗುಜರಾತ್ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಕೇಳಿಕೊಂಡಿದೆ.
ನವದೆಹಲಿ (ಆ.02): ರಾಜ್ಯಸಭಾ ಚುನಾವಣಾ ಹಿನ್ನಲೆಯಲ್ಲಿ ಗುಜರಾತ್ ಶಾಸಕರ ಭದ್ರತೆಯನ್ನು ಖಾತ್ರಿಪಡಿಸಿ ಎಂದು ಗುಜರಾತ್ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಕೇಳಿಕೊಂಡಿದೆ.
ಇಂಧನ ಸಚಿಒವ ಡಿಕೆ ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ರೆಸಾರ್ಟ್’ನಲ್ಲಿ ತಂಗಿದ್ದ ಗುಜರಾತ್ ಶಾಸಕರನ್ನು ಕೂಡಾ ಕೇಂದ್ರೀಯ ಭದ್ರತಾ ಪಡೆಗಳು ಹೆದರಿಸುತ್ತಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಪಿಲ್ ಸಿಬಲ್, ರಾಜೀವ್ ಶುಕ್ಲಾ, ಮನೀಶ್ ತಿವಾರಿ, ರಣದೀಪ್ ಸರ್ಜೆವಾಲಾ ನೇತೃತ್ವದ ನಿಯೋಗವು ಇಂದು ಚುನಾವಣಾ ಆಯೋಗವನ್ನು ಭೇಟಿ ಮಾಡಿ ಶಾಸಕರ ಭದ್ರತೆ ಬಗ್ಗೆ ಮಾತುಕತೆ ನಡೆಸಿತು.
ನಮ್ಮ ಶಾಸಕರ ಮೇಲೆ ಸುಳ್ಳು ಕೇಸ್ ಹಾಕಿ ಅವರನ್ನು ಬಂಧಿಸಲು ಪ್ರಯತ್ನಿಸಿ, ಆ.08 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಮತ ಹಾಕದಂತೆ ತಡೆಯುವ ಸಾಧ್ಯತೆಯಿದೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಚುನಾವಣಾ ಆಯೋಗವನ್ನು ಕಾಂಗ್ರೆಸ್ ಮನವಿ ಮಾಡಿಕೊಂಡಿದೆ.
