Asianet Suvarna News Asianet Suvarna News

ಕಾಂಗ್ರೆಸ್ಸಿಗರ ವೇತನ ಕೇರಳ ನೆರೆ ಪರಿಹಾರಕ್ಕೆ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಎಲ್ಲ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯಾಕಾರಿ ಸಮಿತಿ ಸದಸ್ಯರ ಸಭೆಯಲ್ಲಿ ಭಾಗವಹಿಸಿದ ಬಳಿಕ ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಗ್ರಹವಾದ ಹಣವನ್ನು ಕೇರಳ ಮತ್ತು ಕೊಡಗಿನ ಪರಿಸ್ಥಿತಿ ಆಧಾರಿಸಿ ಪರಿಹಾರ ಒದಗಿಸಲು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

Congress  MPs MLAs to Donate Months Salary to Flood hit Kerala
Author
Bengaluru, First Published Aug 19, 2018, 10:34 AM IST

ನವದೆಹಲಿ[ಆ.19]: ಕೇರಳದಲ್ಲಿ ಮಳೆಯಿಂದ ಆಗಿರುವ ಭಾರಿ ಹಾನಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ಎಲ್ಲ ಲೋಕಸಭಾ, ರಾಜ್ಯಸಭಾ, ವಿಧಾನ ಸಭಾ ಮತ್ತು ವಿಧಾನ ಪರಿಷತ್ ಸದಸ್ಯರು ತಮ್ಮ ಒಂದು ತಿಂಗಳ ವೇತನವನ್ನು ಎಐಸಿಸಿಯ ಪರಿಹಾರ ನಿಧಿಗೆ ನೀಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಎಲ್ಲ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯಾಕಾರಿ ಸಮಿತಿ ಸದಸ್ಯರ ಸಭೆಯಲ್ಲಿ ಭಾಗವಹಿಸಿದ ಬಳಿಕ ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಗ್ರಹವಾದ ಹಣವನ್ನು ಕೇರಳ ಮತ್ತು ಕೊಡಗಿನ ಪರಿಸ್ಥಿತಿ ಆಧಾರಿಸಿ ಪರಿಹಾರ ಒದಗಿಸಲು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಕೇರಳದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ರಾಜ್ಯ ಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಅವರ ನೇತೃತ್ವದಲ್ಲಿ ಕೆಪಿಸಿಸಿ ಪರಿಹಾರ ಸಮಿತಿ ರಚಿಸಿದೆ. ಬಟ್ಟೆಬರೆ, ಆಹಾರ
ಸಾಮಗ್ರಿ, ಔಷಧಿಗಳನ್ನು ಸಂಗ್ರಹಿಸಿ ನೀಡುವ ಉದ್ದೇಶ ವನ್ನು ಕಾಂಗ್ರೆಸ್ ಹೊಂದಿದೆ. ಸೋಮವಾರ ಸಂಜೆ ಮೂರು ಗಂಟೆಗೆ ಈ ಸಮಿತಿಯ ಸಭೆ ನಡೆಯಲಿದೆ. ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿಗಳಲ್ಲಿನ ಮಳೆ ಅನಾಹುತಕ್ಕೂ ಕಾಂಗ್ರೆಸ್ ಸ್ಪಂದಿಸಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
 
Follow Us:
Download App:
  • android
  • ios