ಶಶಿ ತರೂರ್ ಹೇಳಿದ ಹೊಸ ಪದದ ಅರ್ಥ ಹುಡುಕುತ್ತ! Floccinaucinihilipilification ಅಂದ್ರೆನು ಅಂತಾ ನಿಮಗೆ ಗೊತ್ತಾ?! ಹೊಸ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಹೊಸ ಪದ ಬಳಸಿದ ತರೂರ್! 18 ನೇ ಶತಮಾನದ ಲ್ಯಾಟಿನ್ ಪದ ತರೂರ್ ಬಾಯಲ್ಲಿ ಮಾತ್ರ ಬರಲು ಸಾಧ್ಯ
ನವದೆಹಲಿ(ಅ.11): ತಮಗಿರುವ ಅಗಾಧವಾದ ಇಂಗ್ಲೀಷ್ ಪಾಂಡಿತ್ಯದಿಂದಲೇ ಜನರನ್ನು ಸೆಳೆಯುವ ಕಾಂಗ್ರೆಸ್ ಸಂಸದ ಶಶಿ ತರೂರ್, ಇದೇ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಈ ಬಾರಿ ತಮ್ಮ ಹೊಸ ಪುಸ್ತಕದ ಬಗ್ಗೆ ಮಾತನಾಡುತ್ತ ಶಶಿ ತರೂರ್ ಇಂಗ್ಲೀಶ್ ಶಬ್ದವೊಂದನ್ನು ಪರಿಚಯಿಸಿದ್ದು, Floccinaucinihilipilification (ಫ್ಲೋಸಿನಾಸಿನಿನಿಹಿಲಿಪಿಲಿಫಿಕೇಷನ್) ಎಂಬ ಪದವನ್ನು ಬಳಸಿದ್ದಾರೆ. ಆಶ್ಚರ್ಯ ಎಂದರೆ ಈ ಪದದ ಅರ್ಥ ಇದುವರೆಗೂ ಯಾರಿಗೂ ಗೊತ್ತೇ ಇರಲಿಲ್ಲ. ಅರ್ಥವನ್ನು ಇದೇ ಮೊದಲ ಬಾರಿಗೆ ಬಹುತೇಕ ಜನರು ಈ ಪದದ ಅರ್ಥ ತಿಳಿದುಕೊಳ್ಳಲು ಪ್ರಾರಂಭಿಸಿದ್ದಾರೆ.
ತಮ್ಮ ಹೊಸ ಪುಸ್ತಕದ ಬಗ್ಗೆ ಮಾತನಾಡುತ್ತಾ Floccinaucinihilipilification ಎಂಬ ಪದ ಉಪಯೋಗಿಸಿರುವ ಶಶಿ ತರೂರ್, ಮತ್ತೊಮ್ಮೆ ಎಲ್ಲರೂ ನಿಘಂಟು ಹಿಡಿದು ಕುಳಿತುಕೊಳ್ಳುವಂತೆ ಮಾಡಿದ್ದಾರೆ.
ಫ್ಲೋಸಿನಾಸಿನಿನಿಹಿಲಿಪಿಲಿಫಿಕೇಷನ್ ಅಂದರೆ ಯಾವುದೇ ವಸ್ತುವನ್ನಾದರೂ ನಿಷ್ಪಯೋಜಕ ಎಂದು ಅಂದಾಜಿಸುವ ಹವ್ಯಾಸವಾಗಿದೆ. 18 ನೇ ಶತಮಾನದಲ್ಲಿ ಈ ಪದ ಲ್ಯಾಟಿನ್ ನಿಂದ ಬಳಕೆಗೆ ಬಂದಿದ್ದು, ಅತಿ ಕಡಿಮೆ ಜನರು ಇದನ್ನು ಬಳಕೆ ಮಾಡುತ್ತಾರೆ ಎನ್ನಲಾಗಿದೆ.
