ಸಿ.ಎಂ. ಇಬ್ರಾಹಿಂಗೆ ರವಿ ಪೂಜಾರಿ ಬೆದರಿಕೆ

Congress MLC CM Ibrahim gets a threat message on his phone in the name of Ravi Poojary
Highlights

  • ವಾಟ್ಸಾಪ್ಗಳಲ್ಲಿ ಬೆದರಿಕೆ ಸಂದೇಶ ಹರಿದಾಡುತ್ತಿದೆ
  • ಬೆದರಿಕೆ ಬಂದಿರುವುದು ನಿಜವೆಂದ ಪರಿಷತ್ ಸದಸ್ಯರು
  • ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಪ್ರಕೃತಿ ಚಿಕಿತ್ಸಾ ಕೇಂದ್ರ 

ಬೆಂಗಳೂರು[ಜೂ.21]: ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆ ಸಂದೇಶ ಬಂದಿದೆ. 

ಈ ಬಗ್ಗೆ ಸ್ವತಃ ಸಿಎಂ ಇಬ್ರಾಹಿಂ ಅವರೆ ಸುವರ್ಣನ್ಯೂಸ್.ಕಾಂ ಸೋದರ ಸಂಸ್ಥೆ ಸುವರ್ಣ ನ್ಯೂಸ್'ಗೆ ತಿಳಿಸಿದ್ದು, ವಾಟ್ಸಾಪ್ಗಳಲ್ಲಿ ಬೆದರಿಕೆ ಸಂದೇಶ ಹರಿದಾಡುತ್ತಿದ್ದು, ನಾನು ರವಿ ಪೂಜಾರಿ ಎಂಬಾತನ ಜೊತೆ ಮಾತನಾಡಿಲ್ಲ.

ಬೆದರಿಕೆ ಸಂದೇಶ ಬಂದಿರುವುದು ನಿಜ. ಪೊಲೀಸರಿಗೆ ಈ ಬಗ್ಗೆ ಮಾಹಿತಿಯಿದೆ.ಈ ಬಗ್ಗೆ ದೂರು ನೀಡಿಲ್ಲ. ಆತ ಯಾರು ಎಂದು ನನಗೆ ಗೊತ್ತಿಲ್ಲ' ಎಂದಿದ್ದಾರೆ. ಸದ್ಯ ಸಿಎಂ ಇಬ್ರಾಹಿಂ ಅವರು ಧರ್ಮಸ್ಥಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಜಿ ಸಿಎಂ ಭರ್ಜರಿ ವಾಕಿಂಗ್
ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ದಿನಕ್ಕೆ 2 ಬಾರಿ ಭರ್ಜರಿ ವಾಕಿಂಗ್ ನಡೆಸುತ್ತಿದ್ದಾರೆ. ವಾಕಿಂಗ್ ವೇಳೆ ಚಿಕಿತ್ಸೆಗೆ ಬಂದ ಇತರರ ಜೊತೆ ಫೋಟೋಗೆ ಪೋಸ್ ನೀಡಿ ಆತ್ಮೀಯವಾಗಿ ಎಲ್ಲರ ಜೊತೆ ಬೆರೆಯುತ್ತಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ ಆರು ದಿನಗಳ ಕಾಲ ಅಲ್ಲಿಯೇ ಇರಲಿದ್ದಾರೆ. ಪ್ರಕೃತಿ ಚಿಕಿತ್ಸಾ ಕೇಂದ್ರವು ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿದೆ.

loader