ರಾಜಕೀಯ ಕಾರಣಕ್ಕಾಗಿ ಪತ್ನಿ ಮತ್ತು ಜನ್ಮ ಕೊಟ್ಟ ಮಗನನ್ನೇ ಕಾಂಗ್ರೆಸ್ ಶಾಸಕರೊಬ್ಬರು  ಹೊರದಬ್ಬಿದ್ದಾರೆ. ತಿಪಟೂರು ಶಾಸಕ ಕೆ. ಷಡಕ್ಷರಿ ಮೊದಲನೇ ಹೆಂಡತಿ ಇರುವಾಗಲೇ 2ನೇ ಮದುವೆಯಾಗಿದ್ದಾರೆ. ಆಕೆಯ ಜೊತೆ  5 ವರ್ಷ ಸಂಸಾರ ನಡೆಸಿ ಗಂಡು ಮಗುವನ್ನು ಪಡೆದಿದ್ದಾರೆ. ಈಗ 12 ವರ್ಷದ ಮಗನಿದ್ದಾನೆ. ಬೀದಿಗೆ ತಂದ ಅಪ್ಪನ ವಿರುದ್ಧ 12 ವರ್ಷದ ಮಗ ಕೋರ್ಟ್ ಮೆಟ್ಟಿಲೇರಿದ್ದಾನೆ. 

ಬೆಂಗಳೂರು (ನ.20): ರಾಜಕೀಯ ಕಾರಣಕ್ಕಾಗಿ ಪತ್ನಿ ಮತ್ತು ಜನ್ಮ ಕೊಟ್ಟ ಮಗನನ್ನೇ ಕಾಂಗ್ರೆಸ್ ಶಾಸಕರೊಬ್ಬರು ಹೊರದಬ್ಬಿದ್ದಾರೆ. ತಿಪಟೂರು ಶಾಸಕ ಕೆ. ಷಡಕ್ಷರಿ ಮೊದಲನೇ ಹೆಂಡತಿ ಇರುವಾಗಲೇ 2ನೇ ಮದುವೆಯಾಗಿದ್ದಾರೆ. ಆಕೆಯ ಜೊತೆ 5 ವರ್ಷ ಸಂಸಾರ ನಡೆಸಿ ಗಂಡು ಮಗುವನ್ನು ಪಡೆದಿದ್ದಾರೆ. ಈಗ 12 ವರ್ಷದ ಮಗನಿದ್ದಾನೆ. ಬೀದಿಗೆ ತಂದ ಅಪ್ಪನ ವಿರುದ್ಧ 12 ವರ್ಷದ ಮಗ ಕೋರ್ಟ್ ಮೆಟ್ಟಿಲೇರಿದ್ದಾನೆ.

2004 ರಲ್ಲಿ ಮಧು ಎಂಬುವವರನ್ನು ಶಾಸಕ ಷಡಕ್ಷರಿ 2ನೇ ಮದುವೆಯಾಗಿದ್ದರು. 2009 ವರೆಗೂ ಸಂಸಾರ ನಡೆಸಿದ್ದರು. ರಾಜಕೀಯಕ್ಕೆ ತೊಂದರೆಯಾಗುತ್ತದೆ ಅನ್ನೋ ಕಾರಣ ಹೆಂಡತಿಯಿಂದ ದೂರವಾಗಿದ್ದಾರೆ. ಬೇರೊಂದು ಮದುವೆಯಾಗು ಎಂದು ಪತ್ನಿಗೆ ಒತ್ತಡ ಹೇರಿದ್ದಾರೆ ಎನ್ನುವ ಆರೋಪವೂ ಇದೆ.

ಗಂಡ ಷಡಕ್ಷರಿ ಜತೆ ಬಾಳಬೇಕೆಂದು 2ನೇ ಪತ್ನಿ ಮಧು ಪತಿಯ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ನೀಡಿದ್ದಾರೆ. ಕೋರ್ಟ್ ಮೂರು ಬಾರಿ ನೋಟಿಸ್​ ಜಾರಿ ಮಾಡಿದರೂ ಷಡಕ್ಷರಿ ಕೋರ್ಟ್​ಗೆ ಹಾಜರಾಗಿರಲಿಲ್ಲ. 2018 ಜ. 10ಕ್ಕೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಷಡಕ್ಷರಿಗೆ ನೋಟಿಸ್​ ನೀಡಿದೆ.