ಇತ್ತೀಚಿಗೆ ಕಾಂಗ್ರೆಸ್ ಸೇರ್ಪಡೆಯಾದ ಶಾಸಕ ನಾಪತ್ತೆ !

First Published 22, Mar 2018, 10:57 PM IST
Congress MLA Missing
Highlights

ಒಂದು ಕಡೆ ಸ್ವಪಕ್ಷೀಯರಾದ ಸತೀಶ್ ಜಾರಕಿಹೊಳಿ ಮತ್ತೊಂದು ಕಡೆ ಬಿಜೆಪಿಯ ಶ್ರೀರಾಮುಲು ಅವರಿಗೂ ಬಿಸಿ ಮುಟ್ಟಿಸಿದಂತೆ ಆಗುತ್ತೆ ಅಂತ ನಾಗೇಂದ್ರರನ್ನು ಕಾಂಗ್ರೆಸ್​​ಗೆ  ಸೇರ್ಪಡೆ ಮಾಡಿಕೊಳ್ಳಲಾಯ್ತು.

ಕೂಡ್ಲಿಗಿ ಶಾಸಕ ನಾಗೇಂದ್ರ ನಾಪತ್ತೆಯಾಗಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ನಾಗೇಂದ್ರ ಯಾವ ಕ್ಷೇತ್ರದಲ್ಲೂ ಕಾಣಿಸಿಕೊಳ್ಳುತಿಲ್ಲ. ಕಾಂಗ್ರೆಸ್​​ ಸೇರ್ಪಡೆಯಾದ್ರೆ, ಬಳ್ಳಾರಿಯಲ್ಲಿ ಬಿಜೆಪಿ ಧೂಳಿಪಟವಾಗುತ್ತದೆ. ಎಸ್​ಟಿ ಸಮುದಾಯದ ದೊಡ್ಡ ನಾಯಕರಾಗಿ ನಾಗೇಂದ್ರ ಹೊರಹೊಮ್ಮುತ್ತಾರೆ. ಒಂದು ಕಡೆ ಸ್ವಪಕ್ಷೀಯರಾದ ಸತೀಶ್ ಜಾರಕಿಹೊಳಿ ಮತ್ತೊಂದು ಕಡೆ ಬಿಜೆಪಿಯ ಶ್ರೀರಾಮುಲು ಅವರಿಗೂ ಬಿಸಿ ಮುಟ್ಟಿಸಿದಂತೆ ಆಗುತ್ತೆ ಅಂತ ನಾಗೇಂದ್ರರನ್ನು ಕಾಂಗ್ರೆಸ್​​ಗೆ  ಸೇರ್ಪಡೆ ಮಾಡಿಕೊಳ್ಳಲಾಯ್ತು. ಆದ್ರೆ, ಇದೀಗ ಎಲ್ಲವೂ ಉಲ್ಟಾ ಆಗಿದೆ.

ಯಾಕಂದ್ರೆ, ನಾಗೇಂದ್ರ ಕಾಂಗ್ರೆಸ್ ಸೇರ್ಪಡೆಗೊಂಡು 2 ತಿಂಗಳಾದರೂ ತಮ್ಮ ಕ್ಷೇತ್ರವಲ್ಲ, ಬಳ್ಳಾರಿ ಜಿಲ್ಲೆಯತ್ತಲೆ  ಸುಳಿಯುತ್ತಿಲ್ಲ. ಕೂಡ್ಲಿಗಿ ಕ್ಷೇತ್ರ ಬಿಟ್ಟು ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಮೂಲಕ ರಾಮುಲು ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಸಿಎಂ ಸಿದ್ದರಾಮಯ್ಯ ಗೇಮ್ ಪ್ಲಾನ್ ಮಾಡಿದ್ರು. ಆದ್ರೇ, ಇದೀಗ ನಾಗೇಂದ್ರ ತಮ್ಮ ಕ್ಷೇತ್ರ ಬಿಟ್ಟು ಹೊರಬರದಿರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ.

loader