ಶ್ರೀದೇವಿ ಸಾವಲ್ಲೂ ಕಾಂಗ್ರೆಸ್ ರಾಜಕೀಯ

Congress makes politics in sridevi death
Highlights

ರಾಷ್ಟ್ರಪತಿ, ಪ್ರಧಾನಿ ಸೇರಿ ದೇಶದ ಗಣ್ಯರು ಶ್ರೀದೇವಿ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್ ಸಹ ಸಂತಾಪ ಸೂಚಿಸಿ, ಟ್ವೀಟ್ ಮಾಡಿದ್ದು, ಅಲ್ಲಿಯೂ ರಾಜಕಾರಣ ಮಾಡಿದೆ.

ಬೆಂಗಳೂರು: ಅಕಾಲಿಕ ಮೃತ್ಯುವಿಗೆ ತುತ್ತಾದ ಶ್ರೀದೇವಿ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಈ ಮಹಾನ್ ನಟಿಯ ಸಾವಿಗೆ ಎಲ್ಲೆಡೆಯಿಂದ ಸಂತಾಪ ಹರಿದು ಬರುತ್ತಿತ್ತು, ಟ್ವೀಟರ್‌ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ.

ರಾಷ್ಟ್ರಪತಿ, ಪ್ರಧಾನಿ ಸೇರಿ ದೇಶದ ಗಣ್ಯರು ಈ ಅದ್ಭುತ ನಟಿಯ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್ ಸಹ ಸಂತಾಪ ಸೂಚಿಸಿ, ಟ್ವೀಟ್ ಮಾಡಿದ್ದು, ಅಲ್ಲಿಯೂ ರಾಜಕಾರಣ ಮಾಡಿದೆ.

 

 

ಸರಣಿ ಟ್ವೀಟ್ ಮೂಲಕ ಅಗಲಿದ ನಾಯಕ ನಟಿಗೆ ಸಂತಾಪ ಸೂಚಿಸಿರುವ ಕಾಂಗ್ರೆಸ್, 2013ರಲ್ಲಿ ಯುಪಿಎ ಸರಕಾರ ಇರುವಾಗ ಈ ನಟಿಗೆ ಪದ್ಮಶ್ರೀ ಗೌರವ ನೀಡಲಾಗಿತ್ತು, ಎಂದು ಸೂಚಿಸಿರುವುದು ಅಪಾರ ಟೀಕೆಗಳಿಗೆ ಗುರಿಯಾಗಿತ್ತು.
 

loader