ಆಕಸ್ಮಿಕವಾಗಿ ಲಿಫ್ಟ್ ಕೆಟ್ಟು ಹೋಗಿದ್ದರಿಂದ ಕೆಲಕಾಲ ನಾಯಕರು ಪರದಾಟ ಅನುಭವಿಸುವಂತಾಯಿತು
ಬೆಂಗಳೂರು(ಡಿ.2): ಕೆಪಿಸಿಸಿ ಕಚೇರಿಯಲ್ಲಿ ತಾಂತ್ರಿಕ ದೋಷದಿಂದಾಗಿ ಲಿಫ್ಟ್ ಸ್ಥಗಿತಗೊಂಡಿದ್ದ ಕಾರಣ ಕಾಂಗ್ರೆಸ್ ಹಿರಿಯ ನಾಯಕಮ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ 5 ನಿಮಿಷ ಲಿಫ್ಟ್ನಲ್ಲಿ ಸಿಲುಕಿದ್ದರು. ಮೊದಲ ಮಹಡಿಯಿಂದ 2ನೇ ಮಹಡಿಯ ಮಧ್ಯಭಾಗದಲ್ಲಿ ಲಿಫ್ಟ್ ಸ್ಥಗಿತಗೊಂಡಿತ್ತು.
ಆಕಸ್ಮಿಕವಾಗಿ ಲಿಫ್ಟ್ ಕೆಟ್ಟು ಹೋಗಿದ್ದರಿಂದ ಕೆಲಕಾಲ ನಾಯಕರು ಪರದಾಟ ಅನುಭವಿಸುವಂತಾಯಿತು. ಸೈರನ್ ಗುಂಡಿ ಒತ್ತಿದ ಬಳಿಕ ಅಲರ್ಟ್ ಆದ ಸಿಬ್ಬಂದಿ ತಕ್ಷಣ ಮೊದಲ ಮಹಡಿಗೆ ತೆರಳಿ ಬಾಗಿಲು ತೆರೆದರು. ನಂತರ ಮೆಟ್ಟಿಲು ಮೂಲಕ ನಾಯಕರು ಹೊರಬಂದರು.
