ಎಐಸಿಸಿ ಮಹಾಧಿವೇಶನಕ್ಕೆ ರಾಜ್ಯದ 100 ನಾಯಕರು

Congress Leaders Meet In Delhi
Highlights

ದೆಹ​ಲಿ​ಯಲ್ಲಿ ಮಾ.16ರಿಂದ ಮೂರು ದಿನ​ ನಡೆ​ಯ​ಲಿ​ರುವ ಎಐ​ಸಿಸಿ ಮಹಾ ಅಧಿವೇಶನದಲ್ಲಿ ಪಾಲ್ಗೊ​ಳ್ಳಲು ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ, ಕೆಪಿ​ಸಿಸಿ ಅಧ್ಯ​ಕ್ಷ ಡಾ.ಜಿ. ಪರ​ಮೇ​ಶ್ವರ್‌ ಸೇರಿ​ದಂತೆ ರಾಜ್ಯ ಕಾಂಗ್ರೆಸ್‌ ನಾಯ​ಕ​ರ ದೊಡ್ಡ ದಂಡೇ ಗುರು​ವಾರ ಸಂಜೆ ದೆಹ​ಲಿಗೆ ತೆರ​ಳ​ಲಿ​ದೆ.

ಬೆಂಗಳೂರು : ದೆಹ​ಲಿ​ಯಲ್ಲಿ ಮಾ.16ರಿಂದ ಮೂರು ದಿನ​ ನಡೆ​ಯ​ಲಿ​ರುವ ಎಐ​ಸಿಸಿ ಮಹಾ ಅಧಿವೇಶನದಲ್ಲಿ ಪಾಲ್ಗೊ​ಳ್ಳಲು ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ, ಕೆಪಿ​ಸಿಸಿ ಅಧ್ಯ​ಕ್ಷ ಡಾ.ಜಿ. ಪರ​ಮೇ​ಶ್ವರ್‌ ಸೇರಿ​ದಂತೆ ರಾಜ್ಯ ಕಾಂಗ್ರೆಸ್‌ ನಾಯ​ಕ​ರ ದೊಡ್ಡ ದಂಡೇ ಗುರು​ವಾರ ಸಂಜೆ ದೆಹ​ಲಿಗೆ ತೆರ​ಳ​ಲಿ​ದೆ.

ಸಿದ್ದರಾಮಯ್ಯ ಅವರ ಜತೆಗೆ ಪರಮೇಶ್ವರ್‌, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವರು ಹಾಗೂ ಪದಾ​ಧಿ​ಕಾ​ರಿ​ಗಳು ಸೇರಿದಂತೆ ನೂರು ಮಂದಿಗೆ ಈ ಮಹಾ​ಧಿ​ವೇ​ಶ​ನ​ದಲ್ಲಿ ಪಾಲ್ಗೊ​ಳ್ಳಲು ಆಹ್ವಾನ ನೀಡ​ಲಾ​ಗಿದೆ. ಈ ಎಲ್ಲರೂ ಗುರು​ವಾರ ಸಂಜೆಯ ವೇಳೆಗೆ ದೆಹಲಿ ತಲು​ಪ​ಲಿ​ದ್ದಾರೆ. ಇವರಿಗೆ ಊಟೋ​ಪ​ಚಾರ, ವಸತಿ ಸೇರಿ​ದಂತೆ ಅಗತ್ಯ ಸೌಕರ್ಯ ಕಲ್ಪಿ​ಸಲು ಕೆಪಿ​ಸಿ​ಸಿಯು ದೆಹಲಿ ಕರ್ನಾ​ಟಕ ಭವ​ನ​ದಲ್ಲಿ ಕ್ಯಾಂಪ್‌ ಕಚೇ​ರಿ​ಯನ್ನು ತೆರೆ​ಯ​ಲಿದೆ ಎಂದು ಕೆಪಿ​ಸಿಸಿ ಮಾಧ್ಯಮ ಸಂಚಾ​ಲ​ಕ​ ದಿನೇಶ್‌ ಗೂಳಿ​ಗೌಡ ತಿಳಿ​ಸಿ​ದ್ದಾ​ರೆ.

ಬೆಂಗಳೂರಲ್ಲಿಲ್ಲ ಅಧಿವೇಶನ:

ಕಾಂಗ್ರೆಸ್‌ ಅಧಿಕಾರದಲ್ಲಿರುವ ಅತಿ ದೊಡ್ಡ ರಾಜ್ಯವಾದ ಕರ್ನಾಟಕದಲ್ಲಿ ಈ ಬಾರಿಯ ಮಹಾ ಅಧಿವೇಶನ ನಡೆಯಲಿದೆ ಎಂಬ ಮಾತು ಕೇಳಿಬಂದಿತ್ತು. ಈ ಬಗ್ಗೆ ರಾಜ್ಯ ಕಾಂಗ್ರೆಸ್‌ ವತಿಯಿಂದ ಎಐಸಿಸಿಗೆ ಮನವಿಯನ್ನೂ ಸಲ್ಲಿಸಲಾಗಿತ್ತು. ಆದರೆ ಹೈಕಮಾಂಡ್‌ ದೆಹಲಿಯಲ್ಲೇ ನಡೆಸಲು ನಿರ್ಧರಿಸಿದ್ದು, ಹೀಗಾಗಿ ಬೆಂಗಳೂರಿನಲ್ಲಿ ಮಹಾ ಅಧಿವೇಶನ ನಡೆಯಲಿದೆ ಎಂಬ ಕಾರ್ಯಕರ್ತರ ನಿರೀಕ್ಷೆ ಹುಸಿಯಾಗಿದೆ.

ವಿದ್ಯಾರ್ಥಿ ಭವನದಲ್ಲಿ ಸಿಎಂ ದೋಸೆ ಪಾರ್ಟಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಗಾಂಧೀ ಬಜಾರಿನ ವಿದ್ಯಾರ್ಥಿ ಭವನಕ್ಕೆ ತೆರಳಿ ದೋಸೆ ಸವಿದರು. ಮುಖ್ಯಮಂತ್ರಿಗಳ ಜತೆ ಸಚಿವ ಕೆ.ಜೆ. ಜಾಜ್‌ರ್‍, ಸಿಎಂ ಅವರ ಆಪ್ತ ಗೋವಿಂದರಾಜ್‌, ಕೆ.ಆರ್‌. ಪುರ ಶಾಸಕ ಬೈರತಿ ಬಸವರಾಜ್‌ ಇದ್ದರು. ಉತ್ತರಪ್ರದೇಶದಲ್ಲಿ ಬಿಜೆಪಿ ಸೋಲು ಅನುಭವಿಸಿದ ಕಾರಣ ಸಿಎಂ ಖುಷಿಯ ಮೂಡ್‌ನಲ್ಲಿ ಇದ್ದಂತೆ ಕಂಡುಬಂತು.

loader