ಹೈದ್ರಾಬಾದ್ (ಜೂ.19) :  ಕಾಂಗ್ರೆಸ್ ಗೆ ಭಾರೀ ಏಟು ನೀಡಲು ನಾಯಕರು ಸಜ್ಜಾಗಿದ್ದಾರೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಹಲವು ನಾಯಕರು ಪಕ್ಷ ತೊರೆದು ಬಿಜೆಪಿ ಹಾಗೂ ವೈಎಸ್ ಆರ್ ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ.

ಬಿಜೆಪಿ ನಾಯಕರು ನಿರ್ಧಾರ ತೆಗೆದುಕೊಳ್ಳುವಲ್ಲಿ  ತಡ ಮಾಡುತಿದ್ದು, ಈ ನಿಟ್ಟಿನಲ್ಲಿ ಸೇರ್ಪಡೆಯೂ ಕೂಡ ನಿಧಾನವಾಗುತ್ತಿದೆ. ಈ ಸಾಲಿನಲ್ಲಿ ಸಂಸದರು, ಶಾಸಕರು, ಜಿಲ್ಲಾ ಮಟ್ಟದ ನಾಯಕರು ಇದ್ದಾರೆ ಎನ್ನಲಾಗಿದೆ.

ಇತ್ತ ಆಂಧ್ರ ಪ್ರದೇಶದಲ್ಲಿಯೂ ಕೂಡ ವೈ ಎಸ್ ಆರ್ ಕಾಂಗ್ರೆಸ್ ಸೇರಲು ಹಲವು ನಾಯಕರು ಸಜ್ಜಾಗಿದ್ದಾರೆ. 

ಕಾಂಗ್ರೆಸ್ ನಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ನಾಯಕತ್ವದ ಸಮಸ್ಯೆ ಎದುರಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಅನೇಕ ಕಾಂಗ್ರೆಸಿಗರು ತಮ್ಮ ಮುಂದಿನ ಯೋಚನೆಗಳ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳುತ್ತಿದ್ದಾರೆ ಎಂದು ಕೈ ನಾಯಕರೋರ್ವರು ಹೇಳಿದ್ದಾರೆ. ಅಲ್ಲದೇ ಸದ್ಯದ ನಾಯಕತ್ವ ಬಿಜೆಪಿಗೆ ಕೌಂಟರ್ ಕೊಡಲು ಸಮರ್ಥವಾಗಿದೆ ಎಂದು ಅನಿಸುತ್ತಿಲ್ಲ. ಈ ನಿಟ್ಟಿನಲ್ಲಿ ಹಲವು ನಾಯಕರು ಪಕ್ಷ ತೊರೆಯುವ ನಿರ್ಧಾರ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಲೇ ಇದ್ದು ಕಳೆದ ಕೆಲ ದಿನಗಳ ಹಿಂದಷ್ಟೇ 12 ಟಿಆರ್ ಎಸ್ ನಿಂದ ಹೊರ ನಡೆದಿದ್ದರು. ಇದೀಗ ಮತ್ತೊಂದಿಷ್ಟು ನಾಯಕರು ಶಾಕ್ ನೀಡಲು ಸಜ್ಜಾಗುತ್ತಿದ್ದಾರೆ.