ಬೆಂಗಳೂರು [ಜು.20] : ರಾಜ್ಯ ರಾಜಕೀಯದಲ್ಲಿ ಪ್ರಹಸನ ಮುಂದುವರಿದಿದೆ. ವಿಶ್ವಾಸ ಮತ ಯಾಚನೆಗೆ ಡೆಡ್ ಲೈನ್ ಮೇಲೆ ಡೆಡ್ ಲೈನ್ ನೀಡಲಾಗುತ್ತಿದೆ. 

ಇತ್ತ ದೊಡ್ಡ ಗೌಡರ ಮನೆಯಲ್ಲಿ ರಾಜಕೀಯ ರಣ ತಂತ್ರ ನಡೆಯುತ್ತಿದೆ. ಅತ್ತ ಸಿದ್ದರಾಮಯ್ಯ ನಿವಾಸದಲ್ಲಿಯೂ ಕೂಡ ಗಂಭೀರ ಚರ್ಚೆ ನಡೆಯುತ್ತಿದೆ. ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿ ಚರ್ಚೆನಡೆಸಿದ್ದಾರೆ. 

ಮುಂಬೈ ಹೋಟೆಲ್ ನಲ್ಲಿ ನೆಲೆಸಿರುವ ಅತೃಪ್ತರು ಸ್ಥಳ ಬದಲಾವಣೆ ಮಾಡಿದ್ದು, ಅವರನ್ನು ಹೇಗಾದರೂ ಸಂಪರ್ಕಿಸಬಹುದೇ ಎನ್ನುವ ಬಗ್ಗೆ ಚರ್ಚೆ ನಡೆಸಿದ್ದಾರೆ. 

ಬಿಟಿಎಂ ಲೇ  ಔಟ್ ಶಾಸಕ ರಾಮಲಿಂಗಾ ರೆಡ್ಡಿ ತಮ್ಮ ರಾಜೀನಾಮೆ ವಾಪಸ್ ಪಡೆದುಕೊಂಡಿದ್ದು ಇದರಿಂದಾಗಿ  ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ, ಎಂಟಿಬಿ ನಾಗರಾಜ್ ಸಾಕಷ್ಟು ಡಿಸ್ಟರ್ಬ್ ಆಗಿದ್ದಾರೆ. 

 ನಾಲ್ವರನ್ನೂ ಮತ್ತೆ ಸಂಪರ್ಕಿಸಲು ಪ್ರಯತ್ನಿಸಿದರೆ ವರ್ಕೌಟ್ ಆಗಬಹುದು ಎನ್ನುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ಬಗ್ಗೆ ಸಿದ್ದರಾಮಯ್ಯ ನಿವಾಸದಲ್ಲಿ ಚರ್ಚೆ ನಡೆಸಿದ್ದು, ರಾಜ್ಯಪಾಲರು ಕೇಂದ್ರ ಗೃಹ ಇಲಾಖೆಗೆ ವರದಿ ಕೊಟ್ಟಿರುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. 

ರಾಜ್ಯಪಾಲರು ವರದಿ ಕೊಟ್ಟಿದ್ದರಿಂದ ಆಗಬಹುದಾದ ಬೆಳವಣಿಗಗಳ ಬಗ್ಗೆ ಸಮಾಲೋಚನೆ ನಡೆದಿದೆ.