ರಾಹುಲ್ ಹಂಗ್ ಆಡ್ಬೇಡಿ ಶಶಿ: ತರೂರ್‌ಗೆ ಇದೆಂತಾ ಸಲಹೆ?

Congress leader trolled yet again in Facebook
Highlights

ಫೇಸ್‌ಬುಕ್ ನಲ್ಲಿ ಟ್ರೋಲ್‌ಗೆ ಒಳಗಾದ ಶಶಿ ತರೂರ್ 

ದೇಶದ ಆರ್ಥಿಕತೆ ಸರಿಯಿಲ್ಲ ಎಂದ ತರೂರ್

ರಾಹುಲ್ ಗಾಂಧಿಯಂತೆ ಆಡಬೇಡಿ ಎಂಬ ಸಲಹೆ

ಅಷ್ಟಕ್ಕೂ ತರೂರ್ ಪೋಸ್ಟ್ ಮಾಡಿರುವ ಫೋಟೋದಲ್ಲೇನಿದೆ?

ನವದೆಹಲಿ(ಜು.4): ಭಾರತದ ಆರ್ಥಿಕತೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಶಶಿ ತರೂರ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತರೂರ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದು, ಡಾಕ್ಟರ್‌ವೋರ್ವ ತನ್ನ ರೋಗಿಗೆ ನಿನ್ನ ಬೆನ್ನ ಮೂಳೆಯನ್ನು ಫೋಟೋ ಶಾಪ್ ಮೂಲಕ ಸರಿ ಮಾಡಿರುವುದಾಗಿ ಹೇಳುತ್ತಿರುವ ಫೋಟೋ ಹಾಕಿದ್ದಾರೆ.

ಅಂದರೆ ಬಿಜೆಪಿ ಸರ್ಕಾರ ಕೂಡ ಹದಗೆಟ್ಟಿರುವ ಆರ್ಥಿಕ ಸ್ಥಿತಿಯನ್ನು ಮುಚ್ಚಿಟ್ಟುಕೊಳ್ಳಲು, ಸದೃಢ ಆರ್ಥಿಕತೆ ಎಂಬ ನಾಟಕವಾಡುತ್ತಿದೆ ಎಂದು ತರೂರ್ ಆಪಾದಿಸಿದ್ದಾರೆ. ಇದಕ್ಕೆ ಸಾಕಷ್ಟು ಜನ ಕಮೆಂಟ್ ಮಾಡಿದ್ದು, ಕೆಲವರು ಶಶಿ ತರೂರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಹುಲ್ ಗಾಂಧಿ ಅವರಂತೆ ಆಡಬೇಡಿ ಎಂದು ಶಶಿ ತರೂರರ್‌ಗೆ ಕೆಲವರು ತಮಾಷೆಯ ಸಲಹೆ ನೀಡಿದ್ದಾರೆ. ಕಾಂಗ್ರೆಸ್ ದೇಶದ ಆರ್ಥಿಕತೆಯನ್ನು ಅದೆಷ್ಟು ಹದಗೆಡಿಸಿದೆ ಎಂಬುದು ಶಶಿ ತರೂರ್ ಅವರಿಗೂ ಗೊತ್ತು, ಆದರೂ ಅವರು ರಾಹುಲ್ ಗಾಂಧಿಯ ಹಾಗೆ ಪೆದ್ದನಂತೆ ಆಡುತ್ತಿದ್ದಾರೆ ಎಂದು ಕೆಲವರು ತರೂರ್ ಕಾಲೆಳೆದಿದ್ದಾರೆ.

ಇನ್ನೂ ಕೆಲವರು ಮುಂದಿನ ಪ್ರಧಾನಮಂತ್ರಿ ನೀವೇ ಎಂದು ಘೋಷಿಸಿಕೊಂಡು ಬಿಡಿ, ನೀವಾದರೂ ದೇಶ ಉದ್ಧಾರ ಮಾಡಿ ಎಂದು ತರೂರ್ ಅವರನ್ನು ಲೇವಡಿ ಮಾಡಿದ್ದಾರೆ. ತರೂರ್ ಪೋಸ್ಟ್ ಮಾಡಿರುವ ಫೋಟೋ ಭಾರೀ ಸದ್ದು ಮಾಡುತ್ತಿದೆ.

loader