ಬೆಳಗಾವಿ : ಕಾಂಗ್ರೆಸ್ ಅತೃಪ್ತ ನಾಯಕ  ರಮೇಶ್ ಜಾರಕಿ ಹೊಳಿ ಅವರ ಬಳಿ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಹೋದರ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ. 

ರಮೇಶ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದಲ್ಲಿ ನಾವು ಸುಮ್ಮನಿರಬೇಕಾ?  ನಮ್ಮ ಪಕ್ಷವಾದ ಕಾಂಗ್ರೆಸ್ ಬಲಪಡಿಸುತ್ತೇವೆ. ನಮ್ಮ ಸಹೋದರರ ನಡುವೆ ಯಾರೂ ಹುಳಿ ಹಿಂಡುತ್ತಿಲ್ಲ. ಪಕ್ಷವೇ ಬೇರೆ ಸಂಬಂಧವೇ ಬೇರೆ ಎಂದರು. 

ಇನ್ನು KMF ಚುನಾವಣೆ ನಡೆದ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ಮುಖಂಡ ಬಾಲಚಂದ್ರ ಜಾರಕಿಹೊಳಿ ಇಬ್ಬರು ಒಂದಾಗಿದ್ದಾರೆ. ಕಾಂಗ್ರೆಸ್ ಸ್ಥಾನ ಮಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗೋಕಾಕ್ ನಲ್ಲಿ ನಮ್ಮ ಶಕ್ತಿಯನ್ನು ನಾವು ತೋರಿಸಲೇಬೇಕು ಎಂದರು. 

ಇನ್ನು ರಮೇಶ್ ಜಾರಕಿಹೊಳಿ ಯಮನಕರಡಿ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿ ಸ್ಪರ್ಧೆ ಮಾಡುವ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ಅವರು  ರಾಜ್ಯದಲ್ಲಿ ಚುನಾವಣೆಗೆ ಇನ್ನೂ ನಾಲ್ಕು ವರ್ಷಗಳು ಬಾಕಿ ಇದೆ ಎನ್ನುವ ಮೂಲಕ ಐದು ವರ್ಷದ ಅವಧಿಯನ್ನು  ರಾಜ್ಯ ಸರ್ಕಾರ  ಪೂರ್ಣಗೊಳಿಸುವ ಭರವಸೆ ವ್ಯಕ್ತಪಡಿಸಿದರು.