ರೋಹಿಣಿ ಸಿಂಧೂರಿ ವರ್ಗ ಮಾಡಿದ್ದೇ ಸರಿ : ವೈರಲ್ ಆದ ಆಡಿಯೋದಲ್ಲಿ ಮಾತನಾಡಿದ ಕೈ ಮುಖಂಡ

Congress Leader React About Rohini Sindhuri Transfer
Highlights

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಜಿ ಸಚಿವ ಶಿವರಾಂ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ಜ.25): ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಜಿ ಸಚಿವ ಶಿವರಾಂ ವಾಗ್ದಾಳಿ ನಡೆಸಿದ್ದಾರೆ.

ಹಾಸನದಲ್ಲಿ ರೋಹಿಣಿ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ  ದಲಿತರ ಮೇಲೆ ದೌರ್ಜನ್ಯ ನಡೆದಿದೆ. ಭ್ರಷ್ಟಾಚಾರ ನಡೆಯುತ್ತಿದೆ, ಒಂದೇ ಒಂದು ಜನತಾದರ್ಶನವನ್ನೂ ಕೂಡ ಜಿಲ್ಲಾಧಿಕಾರಿಯಾಗಿದ್ದ ವೇಳೆ ಮಾಡಲಿಲ್ಲ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೇ ರೋಹಿಣಿ ಅವರ ದಕ್ಷತೆ ಪ್ರಮಾಣಿಕತೆಯನ್ನೂ ಕೂಡ ಪ್ರಶ್ನೆ ಮಾಡಿದ ಶಿವರಾಂ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಸ್ತಕಾಭಿಷೇಕದ ಕೆಲಸ ಮಾಡುತ್ತಿರುವುದು ಇವರು ಒಬ್ಬರೇನಾ ಎಂದಿದ್ದಾರೆ.

ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಗೃಹ ಸಚಿವರಿಗೆ ದಾಖಲೆಯನ್ನು ನೀಡುತ್ತೇವೆ ಎಂದಿರುವ ಅವರು, ಇಂತಹ ಡಿಸಿಯನ್ನು ವರ್ಗ ಮಾಡಿರುವುದೇ ಸರಿ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

loader