ನವದೆಹಲಿ(ಆ.14): ಯಾವುದೇ ಪೂರ್ವ ಷರತ್ತಿಲ್ಲದೇ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ತಾವು ಸಿದ್ಧ ಎಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಾವು  ಯಾವಾಗ ಭೇಟಿ ನೀಡಬೇಕು ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಕೇಳಿದ್ದಾರೆ. 

ಯಾವುದೇ ಷರತ್ತಿಲ್ಲದೇ ಜಮ್ಮು-ಕಾಶ್ಮೀರ ಜನರನ್ನು ಭೇಟಿ ಮಾಡಲು ರಾಜ್ಯಪಾಲರು ಸಲಹೆ ನೀಡಿದ್ದು, ಅವರ ಆಹ್ವಾನವನ್ನು ತಾವು ಒಪ್ಪಿಕೊಂಡಿದ್ದಾಗಿ ರಾಹುಲ್ ತಿಳಿಸಿದ್ದಾರೆ.

ಕಾಶ್ಮೀರಕ್ಕೆ ಭೇಟಿ ನೀಡಲು ರಾಹುಲ್ ಗಾಂಧಿ ಷರತ್ತು ಹಾಕುತ್ತಿದ್ದಾರೆ ಅಲ್ಲದೆ ವಿರೋಧ ಪಕ್ಷದ ನಾಯಕರ ನಿಯೋಗ ಕರೆತಂದು ಅನಿಶ್ಚಿತತೆ ಉಂಟುಮಾಡಲು ನೋಡುತ್ತಿದ್ದಾರೆ ಎಂದು ನಿನ್ನೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಆರೋಪಿಸಿದ್ದರು.

ಅಲ್ಲದೇ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿಗೆ ವಿಶೇಷ ವಿಮಾನದಲ್ಲಿ ಕರತಂದು ರಾಜ್ಯ ಸುತ್ತಿಸುವುದಾಗಿ ರಾಜ್ಯಪಾಲರು ವ್ಯಂಗ್ಯವಾಡಿದ್ದರು.