ಏನ್ ಸ್ವಾಮಿ ಇದು, ಶಾಂತಿನಗರಕ್ಕೆ ಬರಬೇಕಂದ್ರೆ ನಿಮ್ಮ ಅಪ್ಪಣೆ ಬೇಕಾ?

First Published 27, Feb 2018, 1:13 PM IST
Congress Leader irresponsible statement regard Nalpad case
Highlights

ಶಾಂತಿನಗರ ಲಿಮಿಟ್ಸ್ ಹೋಗ್ಬೇಕು ಅಂದರೆ ಇವರ ಅಪ್ಪಣೆ ಬೇಕಂತೆ..!  ಬೇರೆ ಕ್ಷೇತ್ರದವರು ಯಾರು ಇವರ ಏರಿಯಾಕ್ಕೆ ಬಂದು ಪಾರ್ಟಿ ಮಾಡೋಹಾಗೇ ಇಲ್ವಂತೆ..! ಶಾಸಕ ಹ್ಯಾರಿಸ್ ಸಮ್ಮುಖದಲ್ಲೇ‌ ಕಾಂಗ್ರೆಸ್ ಮುಖಂಡ ಶಿವಕುಮಾರ್ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. 

ಬೆಂಗಳೂರು (ಫೆ. 27): ಶಾಂತಿನಗರ ಲಿಮಿಟ್ಸ್ ಹೋಗ್ಬೇಕು ಅಂದರೆ ಇವರ ಅಪ್ಪಣೆ ಬೇಕಂತೆ..!  ಬೇರೆ ಕ್ಷೇತ್ರದವರು ಯಾರು ಇವರ ಏರಿಯಾಕ್ಕೆ ಬಂದು ಪಾರ್ಟಿ ಮಾಡೋಹಾಗೇ ಇಲ್ವಂತೆ..! ಶಾಸಕ ಹ್ಯಾರಿಸ್ ಸಮ್ಮುಖದಲ್ಲೇ‌ ಕಾಂಗ್ರೆಸ್ ಮುಖಂಡ ಶಿವಕುಮಾರ್ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. 

ಪೊಲೀಸ್ ಅಧಿಕಾರಿಗಳಿದ್ದರೂ ಕ್ಯಾರೆ ಎನ್ನದ ಕಾಂಗ್ರೆಸ್ ಮುಖಂಡ ಶಿವಕುಮಾರ್ ನಲಪಾಡ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಬೇರೆ ಏರಿಯಾದವರನ್ನು ಯಾರು ಇಲ್ಲಿಗೆ ಬರೋದಕ್ಕೆ ಹೇಳಿದ್ದು..? ಡಾಲರ್ಸ್ ಕಾಲೋನಿ ನಿವಾಸಿ ವಿದ್ವತ್ ಶಾಂತಿನಗರ ಲಿಮಿಟ್ಸ್ ಗೆ ಬರೋದಕ್ಕೆ ಹೇಳಿದ್ದು ಯಾರು..? ಎಂದು  ಹ್ಯಾರೀಸ್ ಬಲಗೈ ಬಂಟ ಶಿವಕುಮಾರ್ ವಿಲ್ಸನ್ ಗಾರ್ಡನ್’ನಲ್ಲಿ ನಡೆದ  ಸಾರ್ವಜನಿಕ ಸಮಾರಂಭದಲ್ಲಿ ಉದ್ಧಟತನದ ಮಾತನಾಡಿದ್ದಾರೆ. 
 
ನಲ್ಪಾಡ್ ಏನು ಮಾಡಿಯೇ ಇಲ್ಲ. ವಿದ್ವತ್ ಕುಂಟುತ್ತಾ ಹೋಗಿ ನಲಪಾಡ್ ಮೈ ಮೇಲೆ ವೈನ್ ಸುರಿದಿದ್ದಾನೆ.  ವೈನ್ ಸುರಿದಾಗಲೂ ಶಾಂತ ಮೂರ್ತಿಯಾಗಿ ಕುಳಿತಿದ್ದ ಪ್ರಿನ್ಸ್ ನಲಪಾಡ್.  ಎರಡನೇ ಬಾರಿ ವೈನ್ ಸುರಿದಿದ್ದಕ್ಕೆ ಕೋಪ ಬಂದು ವಿದ್ವತ್ ಗೆ ಒಂದು ಏಟು ಹೊಡೆದ.  ವಿದ್ವತ್ ಇದರಿಂದ ಕೋಪಗೊಂಡು ನಲ್ಪಾಡ್ ಗೆ ಹೊಡೆದಿದ್ದಾನೆ. ಈ ಅನ್ಯಾಯ ನೋಡಿದ ಜನ ವಿದ್ವತ್ ಗೆ ಹೊಡೆದಿದ್ದಾರೆ ಎಂದು ಶಾಂತಿನಗರ ವಾರ್ಡ್ ನಂಬರ್ 116 ಕಾರ್ಪೋರೇಟರ್ ಪತಿ ಶಿವಕುಮಾರ್ ನಲ್ಪಾಡ್ ಬಗ್ಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ.  ಇದನ್ನೆಲ್ಲಾ ನೋಡಿ ಸಮಾರಂಭದಲ್ಲಿ ಮೂಕರಂತೆ ಕುಳಿತಿದ್ದರು ಹಲಸೂರ್ ಇನ್ಸ್‌ಪೆಕ್ಟರ್ ಸುಬ್ರಮಣಿ. 

 

loader