Asianet Suvarna News Asianet Suvarna News

ಬೆಂಬಲಿಗರಿಗೆ ಕೈ ಮುಗಿದು ಬೇಡಿದ ಮಾಜಿ ಸಚಿವ!

ಸಚಿವ ಸ್ಥಾನ ಒತ್ತಾಯ ಪೂರ್ವಕವಾಗಿ ಪಡೆದುಕೊಳ್ಳುವುದಲ್ಲ. ರಾಜೀನಾಮೆ, ಪ್ರತಿಭಟನೆ ಮೂಲಕ ಒತ್ತಡ ಹೇರುವುದು ಸೂಕ್ತವಲ್ಲ. ಪಕ್ಷ ಹಾಗೂ ಪ್ರಜಾಪ್ರಭುತ್ವದ ಹಿತ ದೃಷ್ಟಿಯಿಂದ ಸಚಿವ ಸ್ಥಾನಕ್ಕೆ ಪ್ರತಿಭಟನೆ ಒಳ್ಳೆಯದಲ್ಲ ಎಂದು ಕಾಂಗ್ರೆಸ್ ನಿಂದ ಸಚಿವ ಸ್ಥಾನ ವಂಚಿತರಲ್ಲೊಬ್ಬರಾಗಿರುವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಅಲ್ಲದೇ ಸ್ಥಳೀಯ ಸಂಸ್ಥೆ ಸ್ಥಾನಕ್ಕೆ ರಾಜೀನಾಮೆ ನೀಡುರುವ ಬೆಂಬಲಿಗರು ಅದನ್ನು ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Congress Leader H. K. Patil requests party workers to take back their resignation

ಗದಗ: ಸಚಿವ ಸ್ಥಾನ ಒತ್ತಾಯ ಪೂರ್ವಕವಾಗಿ ಪಡೆದುಕೊಳ್ಳುವುದಲ್ಲ. ರಾಜೀನಾಮೆ, ಪ್ರತಿಭಟನೆ ಮೂಲಕ ಒತ್ತಡ ಹೇರುವುದು ಸೂಕ್ತವಲ್ಲ. ಪಕ್ಷ ಹಾಗೂ ಪ್ರಜಾಪ್ರಭುತ್ವದ ಹಿತ ದೃಷ್ಟಿಯಿಂದ ಸಚಿವ ಸ್ಥಾನಕ್ಕೆ ಪ್ರತಿಭಟನೆ ಒಳ್ಳೆಯದಲ್ಲ ಎಂದು ಕಾಂಗ್ರೆಸ್ ನಿಂದ ಸಚಿವ ಸ್ಥಾನ ವಂಚಿತರಲ್ಲೊಬ್ಬರಾಗಿರುವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ನನ್ನ ಮೇಲಿನ ಅಭಿಮಾನದಿಂದ ಕೆಲ ಸ್ಥಳೀಯ ಸಂಸ್ಥೆ ಸದಸ್ಯರು ರಾಜೀನಾಮೆಗೆ ಮುಂದಾಗಿದ್ದಾರೆ. ದಯವಿಟ್ಟು ರಾಜಿನಾಮೆ ನೀಡಿದವರು ಹಿಂಡೆದುಕೊಳ್ಳಲು ಕೈಮುಗಿದು ವಿನಂತಿಸಿಕೊಂಡರು. ಸಚಿವ ಸ್ಥಾನ ಸಿಗದಿದ್ರು ಸೇವಾ ಅವಕಾಶ ಸಿಕ್ಕ ಸಮಾಧಾನ ನನ್ನದು. ಮಂತ್ರಿಗಿರಿಗಿಂತ ಎತ್ತರ ಸ್ಥಾನದಲ್ಲಿ ನನ್ನ ಜನ ನನ್ನನ್ನು ನೋಡುತ್ತಾರೆ. ನನಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಹಿರಿಯರೆ ಉತ್ತರಿಸಬೇಕು ಎಂದರು.
ಇನ್ನು ಬಾಕಿ ಉಳಿದ 6 ಸ್ಥಾನದಲ್ಲಿ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆಯಲ್ಲಿ ನಾನಿಲ್ಲ. ನಾನೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ರು.

ಗದಗ ಕ್ಷೇತ್ರದಲ್ಲಿ ಸಾತ್ವಿಕ  ರಾಜಕಾರಣದ ಪ್ರಯತ್ನವನ್ನು ಮಾಡಿಕೊಂಡು ಬಂದಿದ್ದದ್ದೇನೆ. ಆದರೆ ಇದಕ್ಕೆ ವಿರುದ್ಧವಾದ ವಾತಾವರಣ ಬಿಜೆಪಿ ನಾಯಕರಿಂದ ವ್ಯಕ್ತವಾಗುತ್ತಿದೆ.  ಜನರನ್ನು ಭಯಭೀತರನ್ನಾಗಿಸಯವ ಜೊತೆಗೆ ಗೌರವಕ್ಕೆ ಧಕ್ಕೆ ತರುವ ಪ್ರಯತ್ನಈ ಹಿಂದೆ ನಡೆದಿರಲಿಲ್ಲ. ಚುನಾವಣಾ ವೇಳೆ ಗದಗಿನ 50 ಜನರಿಗೆ ಐಟಿ ದಾಳಿ ನಡೆಸಲಾಗಿದೆ. ಈ ದಾಳಿಯ ಹಿ<ದೆ ಬಿಜೆಪಿಗರೇ ಇದ್ದಾರೆ ಎಂದು ಆರೋಪ ಮಾಡಿದರು. ನಿಮಗೆ ಚುನಾವಣೆಯಲ್ಲಿ ದುಡ್ಡು ಕೊಡಲಿಲ್ಲ ಅಂತ ದಾಳಿ ಮಾಡಲು ಪಟ್ಟಿ ಕೊಟ್ಟಿರಾ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

Follow Us:
Download App:
  • android
  • ios