ವಿಧಾನಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದ ಹಾಗೇ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಬಿಜೆಪಿ ಮತ್ತು ಜೆಡಿಎಸ್ ಯಾತ್ರೆಗಳಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಸಿದ್ದವಾಗುತ್ತಾ ಇದ್ದರೆ, ಇತ್ತ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಕಸರತ್ತು ನಡೆಸುತ್ತಿದೆ.
ಬೆಂಗಳೂರು (ಡಿ.03): ವಿಧಾನಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದ ಹಾಗೇ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಬಿಜೆಪಿ ಮತ್ತು ಜೆಡಿಎಸ್ ಯಾತ್ರೆಗಳಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಸಿದ್ದವಾಗುತ್ತಾ ಇದ್ದರೆ, ಇತ್ತ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಕಸರತ್ತು ನಡೆಸುತ್ತಿದೆ.
ಬಿಜೆಪಿಯ ಪರಿವರ್ತನಾ ಯಾತ್ರೆ ಮತ್ತು ಜೆಡಿಎಸ್'ನ ಕುಮಾರ ಪರ್ವ ಯಾತ್ರಗಳಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಸಿದ್ದವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಜನಾಶೀರ್ವಾದ ಯಾತ್ರೆ ಯ ಮೊದಲನೇ ಹಂತ ಇದೇ ಡಿಸೆಂಬರ್ 13 ರಿಂದ 18 ರವರೆಗೆ ನಡೆಯಲಿದೆ. ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ನ ಯಾತ್ರೆಗಳ ಫುಲ್ ಡೀಟೆಲ್ಸ್ ತರಿಸಿಕೊಂಡಿರುವ ಸಿದ್ದರಾಮಯ್ಯ, ಜನಾಶೀರ್ವಾದ ಯಾತ್ರೆಯನ್ನು ಯಶಸ್ವಿಗೊಳಿಸಲು ಪ್ಲಾನ್ ರೂಪಿಸಿದ್ದಾರೆ. ಡಿಸೆಂಬರ್ ಹದಿಮೂರರಂದು ಬೀದರ್ ನ ಬಸವಕಲ್ಯಾಣದಿಂದ ಆರಂಭವಾಗುವ ಮೊದಲ ಹಂತದ ಯಾತ್ರೆ ಡಿಸೆಂಬರ್ ಹದಿನೆಂಟಕ್ಕೆ ಬಳ್ಳಾರಿ ತಲುಪಲಿದೆ. ಇನ್ನು ಜನಾಶೀರ್ವಾದ ನಡೆಯುವ ದಾರಿ ಈ ರೀತಿ ಇದೆ.
ಡಿಸೆಂಬರ್ 13 ಬಸವಕಲ್ಯಾಣ
ಡಿಸೆಂಬರ್ 14 ರಾಯಚೂರು
ಡಿಸೆಂಬರ್ 15 ಕೊಪ್ಪಳ
ಡಿಸೆಂಬರ್ 16 ಕಲಬುರಗಿ
ಡಿಸೆಂಬರ್ 17 ಯಾದಗಿರಿ
ಡಿಸೆಂಬರ್ 18 ಬಳ್ಳಾರಿ
