ಮೈತ್ರಿಕೂಟ ಸರ್ಕಾರದ ಎಷ್ಟುದಿನ ಬಾಳಿಕೆ ಬರುತ್ತದೆ ಎಂಬಂತಹ ವಿಚಾರದ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಂದ ಪರೋಕ್ಷವಾಗಿ ಹೊರಬೀಳುತ್ತಿರುವ ವಿಡಿಯೋ ಬಾಂಬ್‌ಗಳ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಇದುವರೆಗೂ ಮುಗುಂ ಆಗಿರುವುದು ಏಕೆ? ಈ ಪ್ರಶ್ನೆಗೆ ಕಾಂಗ್ರೆಸ್‌ ವಲಯದಿಂದ ಎರಡು ರೀತಿಯ ವ್ಯಾಖ್ಯಾನ ಕೇಳಿ ಬರುತ್ತಿದೆ.

ಬೆಂಗಳೂರು: ಮೈತ್ರಿಕೂಟ ಸರ್ಕಾರದ ಎಷ್ಟುದಿನ ಬಾಳಿಕೆ ಬರುತ್ತದೆ ಎಂಬಂತಹ ವಿಚಾರದ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಂದ ಪರೋಕ್ಷವಾಗಿ ಹೊರಬೀಳುತ್ತಿರುವ ವಿಡಿಯೋ ಬಾಂಬ್‌ಗಳ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಇದುವರೆಗೂ ಮುಗುಂ ಆಗಿರುವುದು ಏಕೆ? ಈ ಪ್ರಶ್ನೆಗೆ ಕಾಂಗ್ರೆಸ್‌ ವಲಯದಿಂದ ಎರಡು ರೀತಿಯ ವ್ಯಾಖ್ಯಾನ ಕೇಳಿ ಬರುತ್ತಿದೆ.

1. ಜೆಡಿಎಸ್‌ ನಾಯಕತ್ವ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದರ ಬಗ್ಗೆ ರಾಜ್ಯ ಕಾಂಗ್ರೆಸ್‌ ಮುಖಂಡರು ಈಗಾಗಲೇ ಹೈಕಮಾಂಡ್‌ನ ಗಮನಕ್ಕೂ ತಂದಿದ್ದಾರೆ. ಇದಕ್ಕೆ ಒಂದು ಚೆಕ್‌ ಅಂಡ್‌ ಬ್ಯಾಲೆನ್ಸ್‌ ಇರಲಿ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಬ್ರೇಕ್‌ ಹಾಕುವ ಪ್ರಯತ್ನಕ್ಕೆ ಹೈಕಮಾಂಡ್‌ ಮುಂದಾಗಿಲ್ಲ. ವಿಷಯ ತೀರಾ ವಿಕೋಪಕ್ಕೆ ಹೋದರೆ ಆಗ ಎಲ್ಲರನ್ನೂ ಸಮಾಧಾನ ಪಡಿಸುವ ನೆಪದಲ್ಲಿ ಮೈತ್ರಿಧರ್ಮ ಮೀರುತ್ತಿದೆ ಎನ್ನಲಾದ ಜೆಡಿಎಸ್‌ಗೆ ಲಗಾಮು ಸಾಧ್ಯತೆ.

2- ಸಿದ್ದರಾಮಯ್ಯ ಕಟ್ಟುನಿಟ್ಟಾಗಿ ಇಂತಹ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಿದರೆ ಅದಕ್ಕೆ ಸಿದ್ದರಾಮಯ್ಯ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಖಚಿತವಿಲ್ಲ. ಈಗಾಗಲೇ ಶಾಸಕರ ಗುಂಪು ತಮ್ಮೊಂದಿಗೆ ಇದೆ ಎಂಬ ಸಂದೇಶವನ್ನು ರವಾನಿಸುತ್ತಿರುವ ಸಿದ್ದರಾಮಯ್ಯ ಅವರು ಪಕ್ಷಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಅದನ್ನು ನಿಭಾಯಿಸುವುದು ಹೇಗೆ ಎಂಬ ಗೊಂದಲವೂ ಹೈಕಮಾಂಡ್‌ಗೆ ಇದೆ. ಹೀಗಾಗಿ ತಕ್ಷಣಕ್ಕೆ ಈ ವಿಚಾರಕ್ಕೆ ಕೈ ಹಾಕಲು ಹೋಗುತ್ತಿಲ್ಲ.