Asianet Suvarna News Asianet Suvarna News

ರಾಜ್ಯದಲ್ಲಿ ಅಧಿಕಾರಕ್ಕೇರಲು ‘ಕೈ’ ಮಾಸ್ಟರ್ ಪ್ಲಾನ್: 39 ಹಾಲಿ ಶಾಸಕರಿಗೆ ಶಾಕಿಂಗ್ ನ್ಯೂಸ್

2018ರ ವಿಧಾನಸಭೆ ಚುನಾವಣೆಯನ್ನ ಬಿಜೆಪಿ ಹೇಗೆ ಪ್ರತಿಷ್ಟೆಯಾಗಿ ತೆಗೆದುಕೊಂಡಿದೆಯೋ ಅದಕ್ಕೂ ಒಂದು ಹೆಜ್ಜೆ ಮುಂದೆ ಇಟ್ಟಿದೆ ಕಾಂಗ್ರೆಸ್ ಹೈಕಮಾಂಡ್. ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ  ಬರಲೇಬೇಕೆಂದು ಹಠಕ್ಕೆ ಬಿದ್ದಿರುವ ಹೈಕಮಾಂಡ್ ಒಂದು ದಿಟ್ಟ ಹೆಜ್ಜೆ ಇಟ್ಟಿದೆ. ಆದರೆ, ಹೈಕಮಾಂಡ್ ಹಾಕಿದ ಪ್ಲಾನ್'​​ಗೆ ಕೈ ಅಲುಗಾಡಿ ಹೋಗುತ್ತಾ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ. ಯಾಕೆಂದರೆ ಅಂತಹ ತೀರ್ಮಾನವನ್ನೇ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುತ್ತಿದೆ. ವರಿಷ್ಠರ ಈ ತೀರ್ಮಾನಕ್ಕೆ ರಾಜ್ಯ ನಾಯಕರು ಒಪ್ಪಿಕೊಳ್ಳಬಹುದು. ಆದರೆ, ಶಾಸಕರು ಒಪ್ಪುತ್ತಾರೆಯೇ ಎಂಬ ಅನುಮಾನವಿದೆ?

Congress High Command Making Master Plan For Next Election

ಬೆಂಗಳೂರು(ಜೂ.09): 2018ರ ವಿಧಾನಸಭೆ ಚುನಾವಣೆಯನ್ನ ಬಿಜೆಪಿ ಹೇಗೆ ಪ್ರತಿಷ್ಟೆಯಾಗಿ ತೆಗೆದುಕೊಂಡಿದೆಯೋ ಅದಕ್ಕೂ ಒಂದು ಹೆಜ್ಜೆ ಮುಂದೆ ಇಟ್ಟಿದೆ ಕಾಂಗ್ರೆಸ್ ಹೈಕಮಾಂಡ್. ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ  ಬರಲೇಬೇಕೆಂದು ಹಠಕ್ಕೆ ಬಿದ್ದಿರುವ ಹೈಕಮಾಂಡ್ ಒಂದು ದಿಟ್ಟ ಹೆಜ್ಜೆ ಇಟ್ಟಿದೆ. ಆದರೆ, ಹೈಕಮಾಂಡ್ ಹಾಕಿದ ಪ್ಲಾನ್'​​ಗೆ ಕೈ ಅಲುಗಾಡಿ ಹೋಗುತ್ತಾ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ. ಯಾಕೆಂದರೆ ಅಂತಹ ತೀರ್ಮಾನವನ್ನೇ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುತ್ತಿದೆ. ವರಿಷ್ಠರ ಈ ತೀರ್ಮಾನಕ್ಕೆ ರಾಜ್ಯ ನಾಯಕರು ಒಪ್ಪಿಕೊಳ್ಳಬಹುದು. ಆದರೆ, ಶಾಸಕರು ಒಪ್ಪುತ್ತಾರೆಯೇ ಎಂಬ ಅನುಮಾನವಿದೆ?

ಮತ್ತೊಮ್ಮೆ ಅಧಿಕಾರಕ್ಕೆ ಬರಲೇಬೇಕೆಂದು ನಿರ್ಧಾರ ಮಾಡಿರುವ ಕಾಂಗ್ರೆಸ್ ಹೈಕಮಾಂಡ್ ಭಾರೀ ಹೆಜ್ಜೆಯನ್ನೇ ಇಡಲು ಹೊರಟಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗಷ್ಟೇ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ. 39 ಹಾಲಿ ಶಾಸಕರ ಟಿಕೆಟ್ ಆಸೆಗೆ ಎಳ್ಳು ನೀರು ಬಿಡಲು ರಾಹುಲ್ ಗಾಂಧಿ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಸಂಪ್ರದಾಯ ಕಾಂಗ್ರೆಸ್ ಸೇರಿ ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದೆ. ಆದ್ರೆ. ಏಕಾಏಕಿ ಹಾಲಿ 39 ಶಾಸಕರಿಗೆ ಟಿಕೇಟ್ ನೀಡದಿರಲು ಪ್ರಮುಖ ಕಾರಣಗಳೇನು? ಇದಕ್ಕೂ ಕೈ ಹೈಕಮಾಂಡ್ ಉತ್ತರ ರೆಡಿ ಮಾಡಿಟ್ಟಿದೆ. ಯುವ ನಾಯಕರಿಗೆ ಹಾಗೂ ಹೊಸ ಮುಖಗಳಿಗೆ ಅವಕಾಶ ನೀಡಲು ಹೈ ಕಮಾಂಡ್ ಇಂಥ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಇನ್ನೂ  ಕಾಂಗ್ರೆಸ್'ನ ಬಹುತೇಕ ಶಾಸಕರು ಉತ್ತಮವಾಗಿಯೇ ಕೆಲಸ ಮಾಡುತ್ತಿದ್ದಾರೆ. ಆದರೂ ತಮಗೆ ಟಿಕೆಟ್ ನೀಡಲ್ಲ ಎಂದರೆ ಶಾಸಕರು ಸುಮ್ಮನಿರ್ತಾರಾ ಸಿಡಿದೆದ್ದರೂ ಅಚ್ಚರಿ ಪಡಬೇಕಿಲ್ಲ.

ಅಷ್ಟಕ್ಕೂ ಟಿಕೆಟ್​'ನಿಂದ ವಂಚಿತರಾಗುವ ಶಾಸಕರು ರಾಜ್ಯದ ಒಂದು ಭಾಗಕ್ಕೆ ಸೀಮಿತವಾಗಿಲ್ಲ. ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಬೆಂಗಳೂರು ಭಾಗ ಹಾಗೂ ಮೈಸೂರು ಹಳೆಯ ಭಾಗ. ಹೀಗೆ ಅಳೆದು ತೂಗಿ ಎಲ್ಲಾ ಕಡೆಯಿಂದ 39 ಮಂದಿ ಲಿಸ್ಟ್ ಮಾಡಿದ್ದಾರೆ. ಸುವರ್ಣ ನ್ಯೂಸ್'​ಗೂ ಆ ಪಟ್ಟಿಯಲ್ಲಿರುವ ಶಾಸಕರು ಯಾರು ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ ಹಾಲಿ ಶಾಸಕರಿಗೆ ಟಿಕೆಟ್ ನೀಡಲು ಸಾಧ್ಯವಾಗುತ್ತಿಲ್ಲವಲ್ಲ ಎನ್ನುವ ನೋವು ರಾಜ್ಯದ ಮುಖಂಡರಿಗೆ ಕಾಡುತ್ತಿರುವ ವಿಚಾರವೂ ಗೊತ್ತು..

 

Follow Us:
Download App:
  • android
  • ios