ಮುಂಬರಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಬಿಜೆಪಿ ‘ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ’ ನಡೆಸುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಕೂಡಾ ಸಿದ್ಧತೆ ನಡೆಸಿದೆ.
ಬೆಂಗಳೂರು (ನ.02): ಮುಂಬರಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಬಿಜೆಪಿ ‘ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ’ ನಡೆಸುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಕೂಡಾ ಸಿದ್ಧತೆ ನಡೆಸಿದೆ.
ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ‘ಜನ ಆಶೀರ್ವಾದ ಯಾತ್ರೆ'ಗೆ ಸಿದ್ಧತೆ ಸಿಎಂ ತೀರ್ಮಾನಿಸಿದ್ದಾರೆ. ಡಿ.15ರಿಂದ ಜ.15ರವರೆಗೆ "ಜನ ಆಶೀರ್ವಾದ ಯಾತ್ರೆ" ಬೀದರ್ ಜಿಲ್ಲೆಯಿಂದ ಚಾಮರಾಜಪೇಟೆಯವರೆಗೆ ನಡೆಯಲಿದೆ. ಹೈಟೆಕ್ ಬಸ್ ಮೂಲಕ ಯಾತ್ರೆಗೆ ಹೊರಡಲು ಸಿಎಂ ತೀರ್ಮಾನಿಸಿದ್ದರು. ಆದರೆ ಬಸ್ ಬದಲು ಟೆಂಪೋ ಮೂಲಕ ಯಾತ್ರೆಗೆ ತೆರಳಲು ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಹಿರಿಯ ನಾಯಕರು ಸಲಹೆ ನೀಡಿದ್ದಾರೆ.
