Asianet Suvarna News Asianet Suvarna News

ಸತೀಶ್‌ ಜಾರಕಿಹೊಳಿಗೆ ಮತ್ತೊಂದು ಜವಾಬ್ದಾರಿ ಹೊರಿಸಿದ ಕಾಂಗ್ರೆಸ್‌

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಾಗಿದೆ. ಇದೇ ವೇಳೆ ಖಾತೆಗಳ ಹಂಚಿಕೆಯು ಅಲ್ಪ ಪ್ರಮಾಣದಲ್ಲಿ ಮುಗಿದಿದೆ. ಇದೇ ವೇಳೆ ಅಸಮಾಧಾನಗೊಂಡ ರಮೇಶ್ ಜಾರಕಿಹೊಳಿ ಸಮಾಧಾನ ಮಾಡುವ ಹೊಣೆಯನ್ನು ಸಹೋದರ ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ಮುಖಂಡರು ವಹಿಸಿದ್ದಾರೆ. 

Congress Give Another Responsibility To Satish Jarkiholi
Author
Bengaluru, First Published Dec 27, 2018, 7:49 AM IST

ಬೆಳಗಾವಿ :  ಸಚಿವ ಸ್ಥಾನ​ದಿಂದ ಕೊಕ್‌ ನೀಡಿದ ಹಿನ್ನೆ​ಲೆ​ಯಲ್ಲಿ ಪಕ್ಷ ತೊರೆ​ಯುವ ಬೆದ​ರಿ​ಕೆ​ಯೊ​ಡ್ಡಿ​ರುವ ರಮೇಶ್‌ ಜಾರ​ಕಿ​ಹೊಳಿ ಅವ​ರನ್ನು ಸಮಾ​ಧಾನಪಡಿಸಿ ಪಕ್ಷ​ದೊಂದಿಗೆ ಇರು​ವಂತೆ ಮನ​ವೊ​ಲಿ​ಸುವ ಹೊಣೆ​ಯನ್ನು ಕಾಂಗ್ರೆಸ್‌ ಹೈಕ​ಮಾಂಡ್‌ ರಮೇಶ್‌ ಸಹೋ​ದರ ಹಾಗೂ ನೂತನ ಸಚಿವ ಸತೀಶ್‌ ಜಾರ​ಕಿ​ಹೊಳಿ ಅವ​ರಿಗೆ ವಹಿ​ಸಿದೆ. ಈ ಹಿನ್ನೆ​ಲೆ​ಯಲ್ಲಿ ಬೆಳ​ಗಾ​ವಿಗೆ ತೆರ​ಳಿದ ಸತೀಶ್‌ ಜಾರ​ಕಿ​ಹೊಳಿ ಅವರು ತಮ್ಮ ಸಹೋ​ದರ ರಮೇಶ್‌ ಜಾರ​ಕಿ​ಹೊಳಿ ಅವ​ರನ್ನು ಸಂಪ​ರ್ಕಿ​ಸಲು ಪ್ರಯತ್ನ ನಡೆ​ಸಿ​ದ​ರು.

ಮಂಗ​ಳ​ವಾರ ತಡ​ರಾತ್ರಿ ನಗ​ರಕ್ಕೆ ಆಗ​ಮಿ​ಸಿದ ರಾಜ್ಯ ಉಸ್ತು​ವಾರಿ ಕೆ.ಸಿ. ವೇಣು​ಗೋ​ಪಾಲ್‌ ಅವರು ರಮೇಶ್‌ ಜಾರ​ಕಿ​ಹೊಳಿ ಅವರ ಬಂಡಾ​ಯದ ಬಗ್ಗೆ ಸತೀಶ್‌ ಜಾರ​ಕಿ​ಹೊಳಿ ಅವ​ರೊಂದಿಗೆ ಸುದೀ​ರ್ಘ​ವಾಗಿ ಚರ್ಚಿ​ಸಿ​ದರು. ಅಲ್ಲದೆ, ರಮೇಶ್‌ ಜಾರ​ಕಿ​ಹೊಳಿ ಹಾಗೂ ಅವ​ರೊಂದಿಗೆ ಇರುವ ಶಾಸ​ಕರ ಜತೆ ಖುದ್ದಾಗಿ ಮಾತ​ನಾಡಿ ಯಾರೂ ಪಕ್ಷ ಬಿಡ​ದಂತೆ ನೋಡಿ​ಕೊ​ಳ್ಳ​ಬೇಕು ಎಂಬ ಹೊಣೆ​ಯನ್ನು ವಹಿ​ಸಿ​ದರು ಎನ್ನ​ಲಾ​ಗಿ​ದೆ.

ಈ ಹಿನ್ನೆ​ಲೆ​ಯಲ್ಲಿ ಬೆಳ​ಗಾ​ವಿಗೆ ತೆರ​ಳಿದ ಸತೀಶ್‌ ಜಾರ​ಕಿ​ಹೊಳಿ ಅವರು ರಮೇಶ್‌ ಹಾಗೂ ಅವ​ರೊಂದಿಗೆ ಇರುವ ಶಾಸ​ಕ​ರನ್ನು ಸಂಪ​ರ್ಕಿ​ಸುವ ಹಾಗೂ ಅವ​ರನ್ನು ಸಮಾ​ಧಾನ ಪಡಿ​ಸುವ ಪ್ರಯತ್ನ ನಡೆ​ಸಿ​ದರು ಎನ್ನ​ಲಾ​ಗಿ​ದೆ.

ಈ ಬಗ್ಗೆ ಬೆಳ​ಗಾ​ವಿ​ಯಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಸತೀಶ್‌ ಜಾರ​ಕಿ​ಹೊಳಿ, ಸೌಹಾರ್ದ ಚರ್ಚೆಯಿಂದ ಪಕ್ಷದೊಳಗಿನ ಭಿನ್ನಮತ ಶಮನಗೊಳ್ಳಲಿದೆ. ಇದಕ್ಕೆ ಪಕ್ಷದ ಎಲ್ಲ ಮುಖಂಡರು ಮುಂದಾಗಿದ್ದು, ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ ಜಾರಕಿಹೊಳಿ ಅವರ ಜತೆ ಮಾತನಾಡುತ್ತೇನೆ ಎಂದರು.

ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದ್ದು, ಅಲ್ಲಿ ಎಲ್ಲವನ್ನೂ ಚರ್ಚಿಸಲಾಗಿದೆ. ಖಾತೆಗಳ ಬಗೆಗೂ ಚರ್ಚೆ ನಡೆದಿದ್ದು, ಯಾರೂ ಪಕ್ಷ ಬಿಟ್ಟು ಹೋಗಿಲ್ಲ. ಹೋಗುವುದೂ ಇಲ್ಲ. ಎಲ್ಲವನ್ನೂ ಚರ್ಚಿಸಿ ಸರಿ ಮಾಡಲಾಗುವುದು. ಬಂಡುಕೋರರು ಯಾರೂ ಇಲ್ಲ. ಶಾಸಕರಾದ ರಾಮಲಿಂಗಾರಡ್ಡಿ ಆಗಲಿ, ಸುಧಾಕರ ಆಗಲಿ ಪಕ್ಷದ ಚೌಕಟ್ಟಿನಲ್ಲೆ ಮಾತನಾಡಿದ್ದಾರೆಯೇ ಹೊರತು ಪಕ್ಷವನ್ನು ಬಿಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದರು.

ನಮ್ಮ ಜಿಲ್ಲೆಯ ಶಾಸಕರಾದ ಶ್ರೀಮಂತ ಪಾಟೀಲ, ಮಹೇಶ ಕುಮಠಳ್ಳಿ ಸೇರಿದಂತೆ ಎಲ್ಲರೂ ನಮ್ಮೊಂದಿಗೇ ಇದ್ದಾರೆ. ಅವರು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಇನ್ನು ರಮೇಶ ಜಾರಕಿಹೊಳಿ ಅವರನ್ನು ಹುಡುಕಿ ಭೇಟಿ ಆಗಬೇಕಿದೆ. ಮೊದಲಿನಿಂದಲೂ ಅವರು ಇರುವುದೇ ಹಾಗೆ. ಯಾವುದನ್ನೂ ಸರಿಯಾಗಿ ಮಾತನಾಡುವುದಿಲ್ಲ. ಇದನ್ನು ಸಾಕಷ್ಟುಬಾರಿ ಬಹಿರಂಗವಾಗಿಯೇ ಹೇಳಿದ್ದೇನೆ. ಆದರೂ ಅವರನ್ನು ಇದೀಗ ಭೇಟಿ ಮಾಡಿ ರಾಜಕೀಯವಾಗಿ ಏನು ಹೇಳಬೇಕೋ, ಹೇಗೆ ಹೇಳಬೇಕೋ ಹಾಗೆ ಹೇಳುವ ಪ್ರಯತ್ನ ಮಾಡುತ್ತೇನೆ ಎಂದ​ರು.

ನನಗೆ ಈವರೆಗೆ ಖಾತೆ ಹಂಚಿಕೆ ಆಗಿಲ್ಲ. ನಾನು ಕೂಡ ಯಾವುದೇ ಖಾತೆಯ ಬಗ್ಗೆ ವರಿಷ್ಠರಿಗೆ ಬೇಡಿಕೆ ಇಟ್ಟಿಲ್ಲ. ಭಿನ್ನಮತ ಶಮನಕ್ಕೆ ಎಲ್ಲರೂ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲರ ಅಸಮಾಧಾನ ಇತ್ಯರ್ಥಪಡಿಸುತ್ತೇವೆ. ಇಲ್ಲಿ ಯಾರೂ ಕಾಂಗ್ರೆಸ್‌ ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Follow Us:
Download App:
  • android
  • ios