ಸರ್ಕಾರ ತನ್ನ ಅಮಾನವೀಯ ನಡೆಯ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಹಾಗೂ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನವದೆಹಲಿ (ಫೆ.03): ಮುಸ್ಲಿಮ್ ಲೀಗ್ ನೇತಾರ ಹಾಗೂ ಸಂಸದ ಇ.ಅಹಮದ್ ಅವರ ಸಾವನ್ನು ಸಂಸದೀಯ ಸಮಿತಿಯಿಂದ ತನಿಖೆಗೊಳಪಡಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.

ಫೆ.1ರಂದೇ ಬಜೆಟನ್ನು ಮಂಡಿಸುವ ಸಲುವಾಗಿ ಅಹಮದ್ ಅವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಗುಪ್ತವಾಗಿರಿಸಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ.

ಸರ್ಕಾರ ತನ್ನ ಅಮಾನವೀಯ ನಡೆಯ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಹಾಗೂ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇ. ಅಹಮದ್ ಸಂಸತ್ತಿನಲ್ಲಿ ಕುಸಿದು ಬಿದ್ದ ಬಳಿಕ ಆಸ್ಪತ್ರೆಗೆ ದಾಖಲಿಸಲಾದರೂ, ಅವರ ಆರೋಗ್ಯದ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ಏಕೆ ಕೊಟ್ಟಿಲ್ಲವೆಂದು ಖರ್ಗೆ ಪ್ರಶ್ನಿಸಿದ್ದಾರೆ.

ಮಂಗಳವಾರದಂದು ರಾಷ್ಟ್ರಪತಿ ಭಾಷಣದ ಸಂದರ್ಭದಲ್ಲಿ ಇ, ಅಹಮದ್ ಅವರಿಗೆ ಸಂಸತ್ತಿನಲ್ಲೇ ಹೃದಯಾಘಾತವಾಗಿದ್ದು, ಅಂದು ಮಧ್ಯರಾತ್ರಿ ರಾಮಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದರು.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅಹಮದ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಆಸ್ಪತ್ರೆ ಅಡಳಿತ ಮಂಡಳಿಯು ಕುಟುಂಬಸ್ಥರು ಸೇರಿದಂತೆ ಯಾರಿಗೂ ಅಹಮದ್ ಅವರನ್ನು ನೋಡಲು ಅನುಮತಿ ನೀಡಲಿಲ್ಲ.