ಗೋವಾ ವಿಮಾನ ನಿಲ್ದಾಣದಲ್ಲೇ ರಾಜಕೀಯ ಸಭೆಯನ್ನು ಹಮ್ಮಿಕೊಂಡ ಬಿಜೆಪಿಯ ನಡೆಯು ವಿವಾದವನ್ನು ಸೃಷ್ಟಿಸಿದೆ.  ಬಿಜೆಪಿಯು ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದೆಯೆಂದು ಕಾಂಗ್ರೆಸ್ ಟೀಕಿಸಿದೆ.

ಪಣಜಿ: ಗೋವಾ ವಿಮಾನ ನಿಲ್ದಾಣದಲ್ಲೇ ರಾಜಕೀಯ ಸಭೆಯನ್ನು ಹಮ್ಮಿಕೊಂಡ ಬಿಜೆಪಿಯ ನಡೆಯು ವಿವಾದವನ್ನು ಸೃಷ್ಟಿಸಿದೆ. ಬಿಜೆಪಿಯು ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದೆಯೆಂದು ಕಾಂಗ್ರೆಸ್ ಟೀಕಿಸಿದೆ.

ನಿನ್ನೆ ಗೋವಾದ ಡಾಬೋಲಿಮ್ ವಿಮಾನ ನಿಲ್ದಾಣ ಕಾಂಪ್ಲೆಕ್ಸ್’ನಲ್ಲೇ ಬಿಜೆಪಿಯು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ಸ್ವಾಗತಿಸಲು ರಾಜಕೀಯ ಸಭೆಯನ್ನು ಆಯೋಜಿಸಿತ್ತು ಹಾಗೂ ಅದಕ್ಕಾಗಿಯೇ ವೇದಿಕೆಯಾದಿಗಳನ್ನು ವ್ಯವಸ್ಥೆಗೊಳಿಸಿತ್ತು. 

ಕಾರ್ಯಕ್ರಮದಲ್ಲಿ ಅಮಿತ್ ಶಾ, ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಸೇರಿದಂತೆ ಇನ್ನಿತರ ಸಚಿವರು ಹಾಗೂ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.

ಬಿಜೆಪಿಯು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಅಧಿಕಾರದ ಮದದಲ್ಲಿ ಸರಿಯಾಗಿ ಆಡಳಿತ ನಡೆಸುವ ಪರಿಜ್ಞಾನವನ್ನು ಕಳೆದುಕೊಂಡಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ಬಗ್ಗೆ ತನಿಖೆಯಾಗಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.