ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ಸತ್ಯನೋ ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ ಎಂದು  ಕೆ.ಆರ್.ನಗರದಲ್ಲಿ ಸಿಎಂ ಸಿದ್ದರಾಮಯ್ಯ ರೋಷಾವೇಶದಿಂದ ಹೇಳಿಕೆ ನೀಡಿದ್ದಾರೆ.

ಬೆಂಗಳೂರು (ಅ.15): ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ಸತ್ಯನೋ ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ ಎಂದು ಕೆ.ಆರ್.ನಗರದಲ್ಲಿ ಸಿಎಂ ಸಿದ್ದರಾಮಯ್ಯ ರೋಷಾವೇಶದಿಂದ ಹೇಳಿಕೆ ನೀಡಿದ್ದಾರೆ.

ನನ್ನ ವಿರುದ್ಧ ಎಷ್ಟೇ ದುಷ್ಟ ಶಕ್ತಿ ಸೇರಿಕೊಂಡರೂ ನನ್ನ ಏನು ಮಾಡಲು ಸಾಧ್ಯವಿಲ್ಲ. ಸೋಲು ಗೆಲುವು ಜನ ನಿರ್ಧಾರ ಮಾಡ್ತಾರೆ. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲಿಸಲು ಜೆಡಿಎಸ್ ಹಣದ ಚೀಲ ಇಟ್ಟುಕೊಂಡು ಬಂದಿದ್ದರು. ಆದರೆ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದೆ. ನನ್ನ ವಿರೋಧಿಗಳು ಎಷ್ಟು ಒಟ್ಟುಗೂಡ್ತಾರೋ ಅಷ್ಟೇ ಶಕ್ತಿ ನನಗೆ ಹೆಚ್ಚಲಿದೆ. ಯಾರೇ ಬಂದರೂ ನನ್ನ ಸೋಲಿಸಲು ಸಾಧ್ಯವಿಲ್ಲ ಎಂದು ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇದೇ ವೇಳೇ ಭಾಷಣ ಮಾಡುತ್ತಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಶಾಸಕ ದಿವಂಗತ ಮಂಚನಹಳ್ಳಿ ಮಹದೇವ್ ಅವರ ಗುಣಗಾನ ಮಾಡಿದರು. ನಾನು ಮಹದೇವ್ ಇಬ್ಬರೂ ಪರಮಾಪ್ತರು. ನಾನು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದಾಗ ಮಹದೇವ್ ಕೂಡ ಜತೆಗೆ ಬಂದಿದ್ದರು. ಅವರಿಗೆ 2009 ಚುನಾವಣೆಯಲ್ಲಿ ಟಿಕೆಟ್ ಸಿಗಬೇಕಿತ್ತು. ಆದರೆ ಒಬ್ಬ ಮಹಾಶಯರು(ವಿಶ್ವನಾಥ್) ಅಡ್ಡಗಾಲಾದರು. ನಿಜನಾಗಿ ಅನ್ಯಾಯವಾಗಿದ್ದು ಮಂಚನಹಳ್ಳಿ ಮಹದೇವ್ ಅವರಿಗೆ ಎಂದು ಹೇಳಿದಾಗ ಸಿಎಂ ಮಾತುಗಳಿಗೆ ಮಹದೇವ್ ಪುತ್ರಿ ಐಶ್ವರ್ಯ ಕಣ್ಣೀರಾದರು.