ಕಳೆದ ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಗೆಲ್ಲಲು ಕಾಂಗ್ರೆಸ್’ನ ಪೂರ್ವಯೋಜಿತ ಷಡ್ಯಂತ್ರವೇ ಕಾರಣವೆಂದು ಮಾಜಿ ಕಾಂಗ್ರೆಸ್ ನಾಯಕ ಶಂಕರ್ ಸಿಂಗ್ ವಾಘೇಲಾ ಆರೋಪಿಸಿದ್ದಾರೆ. ಇಬ್ಬರು ಬಂಡಾಯ ಕಾಂಗ್ರೆಸ್ ಶಾಸಕರ ವೋಟು ಅಸಿಂಧುಗೊಳಿಸುವುದರ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ ಎಂದು ಕಳೆದ ತಿಂಗಳು ಕಾಂಗ್ರೆಸ್ ತ್ಯಜಿಸಿರುವ ವಾಘೇಲಾ ಹೇಳಿದ್ದಾರೆ.
ನವದೆಹಲಿ: ಕಳೆದ ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಗೆಲ್ಲಲು ಕಾಂಗ್ರೆಸ್’ನ ಪೂರ್ವಯೋಜಿತ ಷಡ್ಯಂತ್ರವೇ ಕಾರಣವೆಂದು ಮಾಜಿ ಕಾಂಗ್ರೆಸ್ ನಾಯಕ ಶಂಕರ್ ಸಿಂಗ್ ವಾಘೇಲಾ ಆರೋಪಿಸಿದ್ದಾರೆ.
ಇಬ್ಬರು ಬಂಡಾಯ ಕಾಂಗ್ರೆಸ್ ಶಾಸಕರ ವೋಟು ಅಸಿಂಧುಗೊಳಿಸುವುದರ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ ಎಂದು ಕಳೆದ ತಿಂಗಳು ಕಾಂಗ್ರೆಸ್ ತ್ಯಜಿಸಿರುವ ವಾಘೇಲಾ ಹೇಳಿದ್ದಾರೆ.
ಚುನಾವಣಾ ಆಯೋಗ ಇಬ್ಬರು ಬಂಡಾಯ ಕಾಂಗ್ರೆಸ್ ಶಾಸಕರ ವೋಟು ಅಸಿಂಧುಗೊಳಿಸುವುದು ಪೂರ್ವಯೋಜಿತ ಕ್ರಮವಾಗಿತ್ತು. ‘ಅಲ್ಲಿ ಚುನಾವಣಾ ಆಯೋಗದ ಪಾತ್ರವಿರಲಿಲ್ಲ, ಅದು ಮಧ್ಯ ಪ್ರವೇಶಿಸಬಾರದಿತ್ತು. ಶಾಸಕರ ಮತದ ಬಗ್ಗೆ ರಿಟರ್ನಿಂಗ್ ಆಫಿಸರ್’ಗೆ ನಿರ್ಧರಿಸಲು ಅಧಿಕಾರವಿತ್ತು. ಇದು ಕಾಂಗ್ರೆಸ್ ಷಡ್ಯಂತ್ರ, ಎಲ್ಲವೂ ಪೂರ್ವನಿರ್ಧರಿತವಾಗಿತ್ತು, ಎಂದು ವಾಘೇಲಾ ಹೇಳಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಚುನಾವಣೆಯನ್ನು ಪ್ರಶ್ನಿಸಲು ಕಾಂಗ್ರೆಸ್ ಯೋಜನೆ ಹಾಕಿಕೊಂಡಿತ್ತು. ಚುನಾವಣಾ ಆಯೋಗದ ಮುಂದೆ ಏನು ವಾದಿಸಬೇಕು, ಯಾರ ಮತದಾನವನ್ನು ಪ್ರಶ್ನಿಸಬೇಕೆಂದು ಕೂಡಾ ಕಾಂಗ್ರೆಸ್ ಮೊದಲೇ ಲೆಕ್ಕಾಚಾರ ಹಾಕಿಕೊಂಡಿತ್ತು ಎಂದು ಅವರು ಹೇಳಿದ್ದಾರೆ.
ಅಡ್ಡ ಮತದಾನ ಮಾಡಿರುವ ಶಾಸಕರು ಬಿಜೆಪಿಗೆ:
ಸುಮಾರು 36 ಮಂದಿ ಕಾಂಗ್ರೆಸ್ ಶಾಸಕರು ಪಕ್ಷದ ನಾಯಕತ್ವದಿಂದ ಅತೃಪ್ತರಾಗಿದ್ದಾರೆ. ಅಡ್ಡ ಮತದಾನ ಮಾಡಿರುವ ಶಾಸಕರು ಶೀಘ್ರದಲ್ಲಿ ಬಿಜೆಪಿಗೆ ಸೇರಲಿದ್ದಾರೆ ಎಂದು ವಾಘೇಲಾ ತಿಳಿಸಿದ್ದಾರೆ.
‘ತನ್ನ ಶಾಸಕರನ್ನು ಬೆಂಗಳೂರಿಗೆ ಕೊಂಡೊಯ್ಯದಿರುತ್ತಿದ್ದರೆ, 30ಕ್ಕಿಂತ ಹೆಚ್ಚು ಶಾಸಕರು ರಾಜೀನಾಮೆ ನೀಡಿರುತ್ತಿದ್ದರು. ರಾಷ್ಡ್ರಪತಿ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನವನ್ನೇ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿರಲಿಲ್ಲ, ಎಂದು ವಾಘೇಲಾ ಈ ಸಂದರ್ಭದಲ್ಲಿ ಹೇಳಿದ್ದಾರೆ.
