ಬೆಂಗಳೂರು [ಜು.24] : ಎದೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್  ಮೇಲೆ ಈಗ ಹೊಸ ತೂಗು ಗತ್ತಿ ತೂಗುತ್ತಿದೆ. 

ಅನಾರೋಗ್ಯದಿಂದ ಮುಂಬೈಗೆ ತೆರಳಿ ಅಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಮಂತ ಪಾಟೀಲ್ ವಿರುದ್ಧ ಕಾಂಗ್ರೆಸ್ ನಿಂದ ದೂರು ನೀಡಲಾಗಿದೆ.  

ವಿಶ್ವಾಸಮತ ಯಾಚನೆ ವೇಳೆ ಶ್ರೀಮಂತ ಪಾಟೀಲ್ ಗೈರಾಗಿದ್ದು, ಈ ನಿಟ್ಟಿನಲ್ಲಿ ಸ್ಪೀಕರ್ ರಮೇಶ್ ಕುಮಾರ್ ನೋಟಿಸ್ ಜಾರಿ ಮಾಡಿದ್ದಾರೆ. ಖುದ್ದಾಗಿ ಆಗಮಿಸಿ ಗೈರಾದ ಕಾರಣ ತಿಳಿಸಬೇಕು ಎಂದು ಸೂಚನೆ ನೀಡಲಾಗಿದೆ. 

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಖುದ್ದಾಗಿ ಆಗಮಿಸಲು ತಿಳಿಸಲಾಗಿದ್ದು, ಅವರು ಬರುತ್ತಾರೋ ಇಲ್ಲವೋ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಮೇಶ್ ಕುಮಾರ್ ಹೇಳಿದರು. 

ಇದುವರೆಗೂ ತಾವು ಮಾಡಿರುವ ಕೆಲಸ ಹೆಚ್ಚು ತೃಪ್ತಿ ತಂದಿದೆ. ಮುಂದಿನ ಎಲ್ಲಾ ನಡಾವಳಿಗಳು ರಾಜ್ಯಪಾಲರು ನೋಡಿಕೊಳ್ಳುತ್ತಾರೆ ಎಂದು ರಮೇಶ್ ಕುಮಾರ್ ಹೇಳಿದರು.