ಕರ್ನಾಟಕದಲ್ಲಿ ಸಂಪುಟ ರಚನೆಯ ಸರ್ಕಸ್ ಮುಂದುವರಿದಿದೆ. ಸಚಿವ ಸ್ಥಾನಾಕಾಂಕ್ಷಿಗಳ ಪಟ್ಟಿಯೊಂದಿಗೆ ಕಾಂಗ್ರೆಸ್ ಮುಖಂಡರು ದಿಲ್ಲಿಗೆ ತೆರಳಿದ್ದು, 2 ಹಂತದಲ್ಲಿ ಸಂಪುಟ ವಿಸ್ತರಣೆ  ಮಾಡಲು ಈ ವೇಳೆ ತೀರ್ಮಾನ ಮಾಡಿದ್ದಾರೆ.  

ನವದೆಹಲಿ : ಕರ್ನಾಟಕದಲ್ಲಿ ಸಂಪುಟ ರಚನೆಯ ಸರ್ಕಸ್ ಮುಂದುವರಿದಿದೆ. ಸಚಿವ ಸ್ಥಾನಾಕಾಂಕ್ಷಿಗಳ ಪಟ್ಟಿಯೊಂದಿಗೆ ಕಾಂಗ್ರೆಸ್ ಮುಖಂಡರು ದಿಲ್ಲಿಗೆ ತೆರಳಿದ್ದು, 2 ಹಂತದಲ್ಲಿ ಸಂಪುಟ ವಿಸ್ತರಣೆ ಮಾಡಲು ಈ ವೇಳೆ ತೀರ್ಮಾನ ಮಾಡಿದ್ದಾರೆ. 

ಈ ಮೂಲಕ ಪಕ್ಷದೊಳಗಿನ ಅಸಮಾಧಾನ ನಿಯಂತ್ರಣ ಮಾಡಲು ಈ ಪ್ಲಾನ್ ಮಾಡಲಾಗಿದೆ. ಮೊದಲ ಹಂತದಲ್ಲಿ 17 ಸ್ಥಾನಗಳನ್ನು ಭರ್ತಿ ಮಾಡಲು ಚಿಂತನೆ ನಡೆಸಿದ್ದು, ಎರಡನೆ ಹಂತದಲ್ಲಿ ಇನ್ನುಳಿದ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತದೆ. 

ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದರೆ ಮಾತ್ರವೇ 2 ಹಂತದಲ್ಲಿ ಸಂಪುಟ ರಚನೆ ಮಾಡಲಾಗುತ್ತದೆ. ಅದರಂತೆ ಕಾಂಗ್ರೆಸ್ ಹೈ ಕಮಾಂಡ್ ಕೂಡ ರಾಜ್ಯ ನಾಯಕರು ಸಿದ್ಧಪಡಿಸಿರುವ ಸೂತ್ರಕ್ಕೆ ಒಪ್ಪಿಗೆ ನೀಡುವ ಸಾಧ್ಯತೆಗಳು ಹೆಚ್ಚಿದೆ. 

21 ಸ್ಥಾನಗಳ ಪೈಕಿ 17 ಸ್ಥಾನ ಮಾತ್ರ ಮೊದಲ ಹಂತದಲ್ಲಿ ಭರ್ತಿಯಾಗಲಿದ್ದು, ಇಬ್ಬರು ಪಕ್ಷೇತರರಿಗೂ ಮೊದಲ ಹಂತದಲ್ಲೇ ಸಚಿವ ಸ್ಥಾನ ನೀಡಲಾಗುತ್ತದೆ. ನಾಳೆ ಮಧ್ಯಾಹ್ನ 2 ಗಂಟೆಗೆ ರಾಜಭವನದಲ್ಲಿ ಸಚಿವರ ಪ್ರಮಾಣವಚನ ಕಾರ್ಯಕ್ರಮ ಜರುಗಲಿದೆ. ಇಂದು ರಾತ್ರಿ ಸಚಿವರ ಪಟ್ಟಿಯನ್ನು ಹೈಕಮಾಂಡ್ ಸಿದ್ಧಪಡಿಸಲಿದ್ದು, ಬಹುತೇಕ ಹಿರಿಯರಿಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ದೊರೆಯುವುದು ಅನುಮಾನವಾಗಿದೆ. 

ಆಪ್ತರಿಗೆ ಸ್ಥಾನ ಕೊಡಿಸಲು ಇದೇ ವೇಳೆ ಪ್ರಮುಖ ನಾಯಕರು ಕಸರತ್ತು ಮಾಡುತ್ತಿದ್ದು, ಸಿದ್ಧರಾಮಯ್ಯ, ಖರ್ಗೆ, ಪರಮೇಶ್ವರ್, ಶಿವಕುಮಾರ್ ಮೂಲಕ ಆಕಾಂಕ್ಷಿಗಳು ಒತ್ತಡ ಹೇರುತ್ತಿದ್ದಾರೆ.