ಮಧುಸೂದನ್ ಮಿಸ್ತ್ರಿ ಪ್ರಶ್ನೆಗೆ ಕಾಂಗ್ರೆಸ್ ಆಕಾಂಕ್ಷಿಗಳು ಫುಲ್ ಸುಸ್ತು!

First Published 8, Mar 2018, 3:08 PM IST
Congress Aspirants Confused to Madhu sudan Misthri Questions
Highlights

ಟಿಕೆಟ್ ಆಕಾಂಕ್ಷಿಗಳಿಗೆ ಮಧುಸೂದನ್ ಮಿಸ್ತ್ರಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.  ಮಿಸ್ತ್ರಿ ಪ್ರಶ್ನೆಗೆ ಆಕಾಂಕ್ಷಿಗಳು ಫುಲ್ ಸುಸ್ತಾಗಿದ್ದಾರೆ.  

ಬೆಂಗಳೂರು (ಮಾ. 08): ಟಿಕೆಟ್ ಆಕಾಂಕ್ಷಿಗಳಿಗೆ ಮಧುಸೂದನ್ ಮಿಸ್ತ್ರಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.  ಮಿಸ್ತ್ರಿ ಪ್ರಶ್ನೆಗೆ ಆಕಾಂಕ್ಷಿಗಳು ಫುಲ್ ಸುಸ್ತಾಗಿದ್ದಾರೆ.  

ಐಟಿ-ಸಿಬಿಐ ಮಾದರಿಯಲ್ಲಿ ಮಧುಸೂದನ್ ಮಿಸ್ತ್ರಿ  ಇಂಚಿಂಚೂ  ಪ್ರಶ್ನೆ ಕೇಳುತ್ತಿದ್ದಾರೆ.  ನೀವು ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ?  ಪ್ರಸ್ತುತ ಕ್ಷೇತ್ರದ ಮತದಾರರ ಸಂಖ್ಯೆ ಎಷ್ಟು? ಎಷ್ಟು ವಾರ್ಡ್ ಇವೆ? ಅದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಸಂಖ್ಯೆ ಎಷ್ಟು..? ಈ ಬಾರಿ ಹಾಲಿ ಶಾಸಕನ ಬಗ್ಗೆ ಇರೋ ಅಭಿಪ್ರಾಯವೇನು? ಬಿಜೆಪಿ ಶಾಸಕ ಇದ್ರೆ ಅವನನ್ನ ಸೋಲಿಸಲು ನಿಮ್ಮ ಬಳಿ ಇರುವ ಅಸ್ತ್ರಗಳೇನು? ಜಾತಿವಾರು ಸಮೀಕರಣ ಹೇಗಿದೆ..? ಯಾವ ಜಾತಿ ಎಷ್ಟು ಮತದಾರರಿದ್ದಾರೆ.? ನಿರ್ಣಯಕವಾದ ಜಾತಿ ಯಾವುದು..? ಕಾಂಗ್ರೆಸ್ ಪಕ್ಷದಿಂದ ನೀವೇ ಉತ್ತಮ‌ ಅಭ್ಯರ್ಥಿ ಹೇಗೆ..? ಈ ಹಿಂದೆ ಸ್ಪರ್ಧೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಸೋಲಲು ಕಾರಣವೇನು..? ಎಷ್ಟು ಮತಗಳ ಅಂತರದಲ್ಲಿ ಸೋಲು ಕಂಡಿದ್ರು..? ನಿಮ್ಮ ತಂತ್ರಗಾರಿಕೆ ವಿಫಲವಾಗಿದ್ದು ಏಲ್ಲಿ..?  ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಇವರ ಪ್ರಶ್ನೆಗಳಿಗೆ ಕಾಂಗ್ರೆಸ್ ಆಕಾಂಕ್ಷಿಗಳು ತಬ್ಬಿಬ್ಬಾಗಿದ್ದಾರೆ. 

loader