ಉಗ್ರ ನಾಯಕರ ಗುಲಾಮನಾಗಿದೆಯೇ ಪಾಕಿಸ್ತಾನ ಸೇನೆ?| ಮಸೂದ್ ಅಜರ್ ಸಾವಿನ ಕುರಿತು ಆಸೀಫ್ ಗಫೂರ್ ಹೇಳಿದ್ದೇನು?| ಲಾಹೋರ್ ಪೊಲೀಸ್ ಟ್ವಿಟ್ಟರ್ ಅಕೌಂಟ್ ಅಸಲಿಯೋ ನಕಲಿಯೋ?| ಮಸೂದ್ ಸಾಬ್ ಅವರನ್ನೇ ಕೇಳಿ ಸಾವಿನ ಸುದ್ದಿ ಘೋಷಿಸುತ್ತಂತೆ ಪಾಕಿಸ್ತಾನ| ಸತ್ತವನನ್ನು ಕೇಳಿ ಉತ್ತರಿಸಲು ಪಾಕಿಸ್ತಾನದಿಂದ ಮಾತ್ರ ಸಾಧ್ಯ|

ಇಸ್ಲಾಮಾಬಾದ್(ಮಾ.05): ಪಾಕಿಸ್ತಾನ ಉಗ್ರರ ಅಡಗುತಾಣ ಎಂದಷ್ಟೇ ಇದುವರೆಗೂ ನಾವು ಭಾವಿಸಿದ್ದೇವು. ಆದರೆ ಪಾಕಿಸ್ತಾನ ಸರ್ಕಾರ, ಪಾಕಿಸ್ತಾನ ಸೇನೆ ಎಲ್ಲವೂ ಉಗ್ರ ನಾಯಕರ ಗುಲಾಮರು ಎಂಬುದು ಟ್ವೀಟ್ ವೊಂದರಿಂದ ಸಾಬೀತಾಗಿದೆ.

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಸಾವನ್ನಪ್ಪಿರುವ ಕುರಿತು ಈಗಾಗಲೇ ಊಹಾಪೋಹಗಳು ಎದ್ದಿವೆ. ಆದರೆ ಈ ಕುರಿತು ಇದುವರೆಗೂ ಪಾಕಿಸ್ತಾನ ಸರ್ಕಾರ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.

ಈ ಮಧ್ಯೆ ಲಾಹೋರ್ ಪೊಲೀಸರ ಟ್ವೀಟ್ ವೊಂದು ವೈರಲ್ ಆಗಿದ್ದು, ಪಾಕ್ ಸೇನಾ ವಕ್ತಾರ ಮೇಜರ್ ಜನರಲ್ ಆಸೀಫ್ ಗಫೂರ್ ಉಗ್ರ ಮಸೂದ್ ಅಜರ್ ಸಾವಿನ ಕುರಿತು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

Scroll to load tweet…

ಆದರೆ ಈ ಟ್ವೀಟ್ ಮತ್ತು ಟ್ವಿಟ್ಟರ್ ಅಕೌಂಟ್ ಎರಡರ ಕುರಿತೂ ಅನುಮಾಣಗಳಿವೆ ಎನ್ನಲಾಗಿದೆ. ಕಾರಣ ಈ ಟ್ವೀಟ್ ಗೊಂದಲಮಯವಾಗಿದ್ದು, ಮಸೂದ್ ಅಜರ್ ಇನ್ನಿಲ್ಲ. ಆದರೆ ಈ ಕುರಿತು ಮಸೂದ್ ಅಜರ್ ಅವರನ್ನೇ ಕೇಳಿ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂಬರ್ಥದಲ್ಲಿ ಟ್ವೀಟ್ ಮಾಡಲಾಗಿದೆ.

ಮಸೂದ್ ಅಜರ್ ಸಾವನ್ನಪ್ಪಿದ್ದರೆ ಅವನನ್ನು ಕೇಳಿ ಪ್ರಕಟಣೆ ಹೊರಡಿಸಲು ಹೇಗೆ ಸಾಧ್ಯ ಎಂಬುದು ಅರ್ಥವಾಗದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಅಕೌಂಟ್ ಕುರಿತು ಅನುಮಾನಗಳು ಮೂಡಿವೆ.